ಯಾರು ಯಾರು ??????? ಕಾಣದ ಊರಿಲ್ಲ ಇರದ ಜಾಗವಿಲ್ಲ ಒಮ್ಮೆ ಇತ್ತ ಒಮ್ಮೆ ಸುತ್ತ ಜಗದ ತುಂಬೆಲ್ಲ ನಿನ್ನದೆ ಸಾಮ್ರಾಜ್ಯ. ಹಗಿಲಿರಲಿ, ಇರುಳಿರಲಿ ಎತ್ತ ನೋಡಿದರು ನೆರಳಂತೆ ಹಿಂಬಾಲಿಸುವೆ. ತಪ್ಪಿಸಿಕೊಳ್ಳುವ ಜಾಣ್ಮೆ, ಮಿಂಚಿನ ಓಟ, ಯಾರ ಹಂಗಿಲ್ಲದೆ, ಬೇದ ಭಾವ ಎಣಿಸದೆ ಬೇರೆಯುವ ನಿನ್ನ ಸ್ವಭಾವಕೆ ಒಂದು ನಮಸ್ಕಾರ. ನಾ ಸತ್ತರು ಪರವಾಗಿಲ್ಲ ನನ್ನ ಬಂದು ಬಳಗಕ್ಕೆ ಕೊನೆಯಿಲ್ಲ ಎನ್ನುವ ಅಹಂಕಾರ. ತುಂಬಾ ಇಸ್ಟ ಪಡುವ ಸಂಗತಿ ನೀನು ಕೊಡುವ intimation ಯಾವ ಸಂಗೀತ ಸ್ವರಕ್ಕೂ ಮಿಗಿಲಾದುದು. ಅರೆನಿದ್ದೆಯಲ್ಲೂ ಬಡಿದೆಬ್ಬಿಸಿ ನಿನ್ನ ಕಾಣುವ ತವಕ ಸೃಷ್ಟಿಸುವ ಅಲರಾಮ god. ಆ ನಿನ್ನ ಒಂದು ಸ್ಪರ್ಶ ಅದೆಂತ ಮರೆಯದ ಸೆಳೆತ. ಏಚ್ಚರ friends ಇಂತ ಅನುಭವ ಖಂಡಿತ ನಿಮ್ಮ ಗಮನಕ್ಕೂ ಬಂದಿರಬಹುದು ಹಾಗಂತ ಮೈಮರೆತು ಸ್ನೇಹ ಬೆಳೆಸುವ ಪ್ರಯತ್ನ ಬೇಡ.
ಯಾರೇ ನೀನು ????
ಜಗದಿ ನೂರಾರು ಗೆಳೆಯರು
ಅರಿಯದ ಸಿರಿ
ಹುಡುಕಾಡುವ ಪರಿ
ಮನವಾಗಿದೆ ಬುಗುರಿ
ಹಗಲಿರಲಿ ಇರುಳಿರಲಿ
ಬೆಂಬಿಡದ ತಿರುಗಾಟ
ಆಹಾ!!!! ಆ ನಿನ್ನ ಸೆಳೆತ
ನರನಾಡಿಯಲಿ ಮಿಂಚಿನ ಸೆಣಸಾಟ
ಒಮ್ಮೆ ಅತ್ತ ಒಮ್ಮೆ ಇತ್ತ
ಸುತ್ತಲು ಸಪ್ತ ಸ್ವರಗಳ ಗುನುಗಾಟ
ನಿಂತರು ನಿನ್ನದೇ
ಕುಂತರು ನಿನ್ನದೇ
ಕೈಗೆಟುಕದ ಕುಣಿದಾಟ
ಮಾಡಿದೆ ಮರುಳ
ನಿನ್ನ ಈ ನಿಲುಕದ ಹಾರಾಟ.


