Friday, 26 September 2014

ಭಾವಗಳ ಜೊತೆ ಒಂದು ಚದುರಂಗದಾಟ

ಕಪ್ಪು ಬಿಳುಪು ಹಾಗೆ ಒಂದರ ಹಿಂದೆ ಒಂದು ಸುಂದರವಾಗಿ ಜೋಡಿಸಲ್ಪಟ್ಟ ಸುಂದರ ಚೌಕಾಕಾರದ ಮನೆ, ನೂರಾರು ಕಪ್ಪು ಬಿಳುಪಿನ ಕನಸುಗಳೊಂದಿಗೆ ನಿರ್ಮಿತವಾದ ಗುಬಚ್ಚಿ ಗೂಡು. ಯಾವದೇ ಅಡೆತಡೆ ಇಲ್ಲದೆ ನಡೆಯೇಬೇಕೆಂಬುವ ಹಂಬಲ, ಪ್ರತಿ ಹೆಜ್ಜೆಗೂ ಗೆಲ್ಲುವ ನನ್ನದೇ ಎನ್ನುವ ಬಿಗುಮಾನ. ಅರಿವಿಲ್ಲದ ಬರುವ ಏಟುಗಳಿಗೆ ನೂರು ಕೈಗಳ ಸಹಕಾರ. ರಕ್ಷಣೆಗೆ ಪಣತೊಟ್ಟು ಸುತ್ತು ಒರೆದ ಸೈನಿಕರು ಒಂದಡೆ ಆದರೆ, ಪ್ರತಿ ನಡೆಗೆ ಹಿಂಬಾಲಿಸುವ ಜೊತೆಗಾರರು ಹಲವಾರು. ಕೊನೆ ಇಲ್ಲದೆ ನಡೆವ ತಿರುವುಗಳ ಆಟದಲಿ ಸಾಯುವ ಜೀವಗಳು ನೂರಾದರೆ ನಾ ನಿನ್ನ ಜೊತೆಯಲ್ಲಿ ಎಂದು ನಡೆವ ಮನಗಳು ಕೆಲವು, ಭರವಸೆಯ ಜೊತೆಗೆ ಸ್ವಲ್ಪ ಬುದ್ದಿವಂತೆಗೆಯ ನಡೆಯಲ್ಲಿ ಈ ನಿರ್ಮಲ ಸೌದದಲ್ಲಿ ಹೆಸರು ಬರೆಯುವರಾರು?  

ಚದುರಂಗದಾಟ

ಜೀವನದ ಚದುರಂಗದಾಟದಲ್ಲಿ
ಅರವತ್ನಾಲ್ಕು ಮನೆಗಳು
ಒಮ್ಮೆ ಕಪ್ಪು ಮೊಗದೊಮ್ಮೆ ಬಿಳುಪು
ಹೆಜ್ಜೆಗಳ ನಡೆಯಲ್ಲಿ
ಗೆಲುವಿನ ಬಯಕೆಗಳು 


ನಾ ರಾಣಿಯಂತೆ
ನೀ ರಾಜನಂತೆ
ಸುತ್ತಲು ಕನಸುಗಳ
ಕಟ್ಟೆಯಂತೆ
ರಕ್ಷಣೆಯ ಕೈಗಳು
ಸ್ನೇಹದ ಹಸ್ತಗಳು
ಸಾರಥಿಯ ಜೊತೆಯಲ್ಲಿ
ಬೆನ್ನಟ್ಟಿ ಭಾವಗಳ
ಹುಡುಕುತಿರುವ ನಿರ್ಮಲ
ಸೌಧವಂತೆ 


ನೇರ ನುಡಿಯ ಸರದಾರ
ಭರವಸೆಗಳ ಬಹದ್ದೂರ್
ಅಳುಕಿಲ್ಲದೆ ಮುನ್ನೆಡೆವ
ಮಗದೀರ
ಛಲ ಬಿಡದೆ
ಕೈ ಹಿಡಿದು ನಡೆಸುವ
ಮಂದಾರ ಜೊತೆ ಇರೆ
ಹೊಂಗನಸಿನ ಆಟದಲಿ
ಬರೆಯುವ ಹೆಸರ
ನವ ಇತಿಹಾಸದಿ 



Life is like a game of Chess, changing with each move” (Chinese proverb)

Tuesday, 9 September 2014

ಹುಡುಕಾಟದ ಚಿಟ್ಟೆ

ಎತ್ತ ನೋಡಿದರು ಹಸಿರು ನೀನ ಚೆಂದ ನಾನ ಚೆಂದ ಎಂದು ಬಿಗುತಿರುವ ಹೂವಗಳ ಸಾಲು ........ ನಾನೇನು ಕಡಿಮೆ ಎಂದು ಅತ್ತಿಂದ ಇತ್ತ ಇತ್ತಿಂದ ಅತ್ತ ಹೂವಿಂದ ಹೂವಿಗೆ ಬಿಗುಮಾನವಿಲ್ಲದೆ ಹಾರುವ ಪರಿ ಅದೆಷ್ಟು ಚೆಂದ ನೋಡಲು........ ಆ ಸೊಬಗಿಗೆ ಮನ ಸೋಲದವರಿಲ್ಲ, ನೀ ಸಿಕ್ಕ ಕ್ಷಣ ಆನಂದಕ್ಕೆ ಕೊನೆ ಇಲ್ಲದೆ ಕುಣಿದಾಟ, ನಿನ್ನನ್ನು ಹಿಡದ ನಾನೆ great ಅನ್ನೋ ಹಾರಾಟ........ ಅಕ್ಕ ಪಕ್ಕದ ಸ್ನೇಹಿತರು, ಆಂಟಿ, uncle ಎಲ್ಲರಿಗು ನಿನ್ನ ಪರಿಚಯದ ಭಾಷಣ. ಆ ನಿನ್ನ colorful beauty ನನಗು ಇರಬಾರದಿತ್ತೆ ಅನ್ನುವ ಗೊಣಗಾಟ, ನಿನ್ನಂತೆ ನಾನು ಎಲ್ಲೆಂದರಲ್ಲಿ ಅಲ್ಲಿ ಸ್ವಚಂದವಾಗಿ ಹಾರಾಡುವ ಹಾಗೆ ಇರಬಾರದಿತ್ತೆ ಅನ್ನುವ ಬೇಜಾರು.......  ನಿನ್ನನ್ನು ಬೆನ್ನಟ್ಟಿ ಓಡುವದರಲ್ಲಿ ಅದೇನೋ ಖುಷಿ. ಆದರೆ, ಇಂದು ಕೇವಲ computer, mobile, video game ಅನ್ನೋ ವಸ್ತುಗಳ ಮೇಲೆ ಇರುವ ವ್ಯಾಮೋಹ ಕೆಲವು ಬೆರಳಂಚಿನಲ್ಲಿ ನಿನ್ನೊಡನೆ ಆಡುವ ಸಂಗತಿ ಖೇದವೆನಿಸುತ್ತದೆ. ಹಾಗೆ ನಿನ್ನ ಸಂತತಿ ದಿನದಿಂದ ದಿನಕ್ಕೆ ಕ್ಷಿಣಿಸುತ್ತಿರುವದನ್ನು ಗಮನಿಸಿದರೆ ಮುಂದೊಂದು ದಿನ ಪುಸ್ತಕದ ಪರಿಚಯದ ಪುಟವಾಗುವದರಲ್ಲಿ ಸಂಶಯವಿಲ್ಲ. ನಿನ್ನ ನೆನಪಿಗಾಗಿ ಸಣ್ಣ ಪ್ರಯತ್ನದೊಂದಿಗೆ ಒಂದು ಹೆಜ್ಜೆ.


ಸದ್ದಿಲ್ಲದೇ ಗದ್ದಲವಿಲ್ಲದೆ 
ಪಟಪಟನೆ ಬಡಿಯುತ  
ಬಣ್ಣ ಬಣ್ಣದ ರೆಕ್ಕೆಯ 
ಹೊರಟೆ ನೀನು ಎಲ್ಲಿಗೆ?

ಭುವಿಯಿಂದ ಬಾನಿಗೆ 
ಭಾನಿಂದ ಮೆಲ್ಲಗೆ 
ಹಂಗಿಲ್ಲದೆ ಸುಳಿವಿಲ್ಲದೆ 
ಹುಡುಕುತಿರುವೆ ಯಾರಿಗೇ ???

ಸುತ್ತ ನೋಡೇ ಕಪ್ಪು ಬಿಳಪು 
ಮದ್ಯೆ ಚುಕ್ಕಿ ಪಚ್ಚೆ ಬೆಳಕು 
ಹೆಜ್ಜೆ ಗೆಜ್ಜೆ ಅಚ್ಚಿಲ್ಲದೆ 
ಹಾರುತಿರುವೆ ಎಲ್ಲಿಗೆ ?

ಮೈಯ್ಯ ತುಂಬಾ ಕಣ್ಣು ಬಣ್ಣ
ಸೃಷ್ಟಿಗೊಂದು ಬೊಟ್ಟಿನಂತೆ
ಜಗವ ಮರೆಸಿ ದೂರ ಅರಸಿ
ಬೀಗಿ ಸಾಗಿ ಹೊರಟ ಚೆಲುವು
ಕೇಳೋ ಆಸೆ ಎದೆಯ ಒಳಗೆ
ಪಯಣ ಎಲ್ಲಿಗೆ ?

“My thoughts are like butterflies. They are beautiful, but they fly away.” :) :) 

Thursday, 14 August 2014

ಮತ್ತೆ ಬರಬಾರದೇ ಮರಳಿ

ರಸ್ತೆಯ ಅಕ್ಕ ಪಕ್ಕಕ್ಕೆ ಬಣ್ಣ ಬಣ್ಣದ dress ತೊಟ್ಟು ಕಿವಿಯಲ್ಲಿ headphone, ಕಣ್ಣಗಳು ಏನೋ ಹುಡುಕುತಿರುವ ಭಾವ, ಮತ್ತೆ ಕೆಲವು time ಆಯ್ತು ಅನ್ನುವ ಆತಂಕ ಲಗುಬಗೆಯಿಂದ ದಾಪುಗಾಲು ಹಾಕುತಿರುವ ಹೆಜ್ಜೆಗಳು, hi, good morning ಅನ್ನುತ ಅಂತು ಗೂಡು ಸೇರಿದ ನಿಟ್ಟಿಸುರು........  ಅಂದಕ್ಕೆ ಚಂದಕ್ಕೆ ನಾಲ್ಕು ಮಾತು, ಹಾಗಾಯ್ತು ಹೀಗಾಯ್ತು ಅಂತ ಸ್ವಲ್ಪ ಹರಟೆ, ಅಂತು ಇಂತು market ಇಂದ ಹಿಡಿದು ದೇಶದ ಎಲ್ಲಾ ಸುದ್ದಿಗಳ ಕಡೆ ಒಂದು ಇಣುಕು ನೋಟ ಹಾಕಿ ಕೊನೆಗೆ google ಜೊತೆ ಹಗ್ಗ ಜಗ್ಗಾಟದ ಆಟ start............ ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರಗೆ ಗಳಿಗೆಗಳ ಜೊತೆ ಒಡನಾಟ, ಕಷ್ಟಗಳ ಮನಗಳಿಗೆ ನಗುವಿನ ಮುಖ ತೋರಿಸಿದ ಅದೆಸ್ಟೋ ಸಮಯಗಳು....   ಹೀಗೆ ವರ್ಷಗಳು ಕಳೆದ ಮನಗಳಿಗೆ ನೆನಪುಗಳು ಮಾತ್ರ....... 




ಮತ್ತೆ ಬರಬಾರದೇ 
ಕಳೆದು ಹೋದ ದಿನಗಳು 
ಜೀವನದ ಮಧುರ ಕ್ಷಣಗಳು 
ದೀನವಿಡಿ ನಲಿದಾಡಿದ ಗಳಿಗೆಗಳು 
ಕೊನೆ ಇಲ್ಲದ ಮಾತುಗಳು 
ಮಾತಿಗೊಂದು ಹಾಸ್ಯ 
ಹಾಸ್ಯಕೊಂದು ಮಾತು 
ಕನಸಂತೆ ಕಳೆದ ವರುಷಗಳು 
ಗುರಿ ಮುಟ್ಟಿದ ಸಂತಸದ ನೆನಪುಗಳು 
ನೂರು ಭಾವನೆಗಳ ಮರೆಮಾಚಿ ಮನದಿ 
ನಗು ಅರಳಿಸಿದ ಮೂಖಗಳು 
ಮರಳಬಾರದೇ ಮತ್ತೆ 

Whenever I think of the past, it brings back so many memories. Steven Wright

Monday, 31 March 2014

ಸಂಜೆಯ ಸವಿನೆನಪಿನೊಂದಿಗೆ ದಿನ

ಎಲ್ಲೆಲ್ಲೂ ಹಸಿರಿನ ಸೊಬಗು ಕಣ್ಣಮನ ಸೆಳೆಯುವ ಸೌಂದರ್ಯ ಪ್ರಕೃತಿಯ ಚೆಲುವಿಗೆ ರೆಕ್ಕೆಬಿಚ್ಚಿದ ಪಕ್ಷಿಯ ಹಾಗೆ ಕುಣಿದಾಡುವ ಮನ ಅದರ ನಡುವೆ ಜುಳು ಜುಳು ಹರಿವ ಸಣ್ಣ ಗಂಗೆಯ ವಡಲು ಜೊತೆಗೆ ನನ್ನೊಂದಿಗೆ ಕೈ ಹಿಡುದು ನಡೆಸುತ್ತೇನೆ ಎನ್ನುವ ಪುಟ್ಟ ಹೃದಯದ ಮಾತು ಆಹಾ!!!!!! ಸ್ವರ್ಗಕ್ಕೆ ನಾಕೆ ಗೇಣು ಎನ್ನುವ ಮನದಾಳ........ ಅದೇಕೋ ತುಂಬಾ ನೆನಪಾಗುತ್ತಿದೆ ಇವತ್ತು ಬಹುಶ ಇದೇ ಹಬ್ಬದ ದಿನ ಅಂತ ಕಾಣುತ್ತೆ ನಾವಿಬ್ಬರು ಭೇಟೆ ಆದ ಸವಿನೆನಪಿನ ದಿನ. ಮನಸೇ ಹಾಗೆ 

ಮನಸೊಂದು ಬಣ್ಣದ ಮೂಟೆ 
ಅದರ ಮುಖಗಳು ಹಲವಾರು
ನೋಡುವ ಕಣ್ಣಗಳು ನೂರಾರು
ಬಯಸುವ ಬಯಕೆಗಳು ಹತ್ತಾರು 
ಮನದೊಳಗಿರುವ ಮಾತುಗಳು ಸಾವಿರಾರು 
ಹೃದಯಕ್ಕೆ ನಿಲುಕುವವು ಹದಿನಾರು 

ಅದೆಷ್ಟು ಚೆನ್ನಾಗಿತ್ತು ನಾವು ಕಳೆದ ದಿನಗಳು, ಊರು ನಿನಗೆ ಹೊಸದೇನಲ್ಲ ಆದರೆ ನನಗೆ ಎಲ್ಲವು ಹೊಸದು ಹಸಿರಿಗೆ ನಾನು ಸೋತುಹೊಗಿದ್ದೆ ಹಾಗೆ ಕೂಡ ನಿನಗೇನೂ ಇರಬಹುದು. ಸಿಟಿಗೆ ಹತ್ತಿರವಾದ ಊರು ಆದರು ಅದೇಕೋ ಕಾಣೆ ಬಸ್ಸಿನ ಸೌಲಬ್ಯ ಮಾತ್ರ ಶೂನ್ಯ ನದಿ ದಾಟಿ ಪ್ರತಿಯೊಂದಕ್ಕು ಹೋಗ ಬೇಕಾದ ಅನಿವಾರ್ಯತೆ. ನಿಜ, ಇದೇ ಆಲ್ಲೆವೆ ನಮ್ಮ ದೇಶದ ಪರಿಸ್ಥಿತಿ ಅದೆಷ್ಟು ಹಳ್ಳಿಗಳು ಇನ್ನು ಕೂಡಾ ಮನುಷ್ಯನ ದಿನನಿತ್ಯದ ಅವಶ್ಯಕತೆಗೆ ಬೇಕಾದ ಸೌಲ್ಯಭ್ಯಗಳನ್ನ ಕಂಡಿಲ್ಲ. ವಿಪರ್ಯಾಸ ಅಂದರೆ technology, development ಅನ್ನುವ ಪದಗಳು ಕೇವಲ ಬೇರೆಳೆನಿಕೆಯ ಹಳ್ಳಿ, ಸಿಟಿಗಳಿಗೆ ಸ್ಥಿಮಿಥವಾಗಿರೋದು.ಆದರೆ ಸ್ನೇಹಕ್ಕೆ ಸಾಕ್ಷಿಯಾಗಿದ್ದು ಮಾತ್ರ ಅದೇ ದಾರಿ ಅಂದರೆ ತಪ್ಪಾಗಲಾರದು





ಆದೆ ಮೊದಲನೆ ದಿನ ಕಾಲೇಜಿಗೆ ನಾನು ಮತ್ತು ನನ್ನ ಗೆಳತಿಯರ ಜೊತೆ ದೋಣಿಯಲ್ಲಿ ಸಾಗಿ ದಡ ಸೇರುವ ಪ್ರಯತ್ನದಲ್ಲಿ ಇದ್ದೆವು ಆಗ ನನ್ನ ಕಣ್ಣನ್ನು ಸೆಳೆದಿದ್ದು ನೀನು. ಕ್ಲಾಸಿಗೆ entry ಕೊಟ್ಟ ಮೇಲೆ ಗೊತ್ತಾಗಿದ್ದು ನೀಂದು ಕೂಡಾ ಆದೇ ಕಾಲೇಜೆಂದು. ನಿಜ ಹೇಳತೆನಿ ಮೂರು ವರುಷ ಕಳೆದರು ಒಂದು ಮಾತು ಕೂಡ ಆಡಿರಲಿಲ್ಲ ಆದರೂ ಕಣ್ಣು ಮಾತ್ರ ನಿನ್ನನ್ನು ಹುಡುಕುತ್ತಿದ್ದವು ಅದೇಕೋ. ನೀನು ಕೂಡ ಅದಕ್ಕೆ ಹೊರತಾಗಿರಲ್ಲಿಲ್ಲ ಅಂತ ಅಂದುಕೊಳ್ಳುತ್ತೇನೆ. ಮನದಲ್ಲಿ ನೂರಾರು ಭಾವನೆಗಳನ್ನ ಹುಟ್ಟು ಹಾಕಿ, ಹೃದಯ ಮೂಲೆಯಲ್ಲೇ ಮನೆ ಮಾಡಿತ್ತು ನೋಟ

ಸುತ್ತಲು ಹುಡುಕಾಟ 
ಮುಗ್ದ ಮನಸಿನ ಹೊಯ್ದಾಟ 
ದೂರದ ಕನ್ನಸನ್ನೆಯ ನೋಟ 
ನಾಚಿ ನಲುಗುತಿರುವ ಮನದಾಟ
ಅರಿಯದ ಪ್ರೀತಿಯ ಪರದಾಟ 

ಅದ್ದೆಸ್ಟೋ ನೋವನ್ನು ಮರೆಸಿ ಹೊಸ ಹೊಸ ಕನಸುಗಳ್ಳನ್ನ ಮೂಡುವ ಹಾಗೆ ಮಾಡಿದ್ದೇ ಸ್ನೇಹ. ಮನಸೇ ಹಾಗಲ್ಲವೇ ಬಣ್ಣಗಳ ಮೂಟೆ, ಪ್ರೀತಿ ಹತ್ತಿರ ಇದ್ದಾಗ ಜಗತ್ತನ್ನೇ ಗೆದ್ದ ಆನಂದ, ಕಾಣದ ದಿನ ಚಿಂತೆಗಳ ಸಾಗರ.  Really, ದಿನ ನೀನು ಬರದೆ ಇದ್ದಾಗ ಕಳೆದ ಒಂದೊಂದು ಕ್ಷಣವೂ ಯುಗಗಳಾಗಿತ್ತು. ಈಡಿ ದಿನವನ್ನ ದಡದ ಬದಿಯಲ್ಲೇ ಕಳದಿದ್ದೆ. ಕೊನೆಗೂ ನಮ್ಮ ಇಬ್ಬರ ಮೌನದ ಮಾತಿಗೆ ಕೊನೆಹಾಡಿದ್ದು ಕಾಲೇಜಿನ ಕೊನೆಯ  ದಿನದ ಸಂಜೆಯ ಸವಿಗಳಿಗೆ

ಹೇಗೆ ಮರೆಯಲಿ ದಿನಗಳನ್ನ
ನೀನ ಆಡಿದ ಮಾತುಗಳು
ಅಚ್ಚ ಅಳಿಯದೆ ಉಳಿದಿವೆ
ನನ್ನ ಹೃದಯದಲ್ಲಿ 

ಮರೆತರು ಮರೆಯದಿರುವ
ನೂರಾರು ಮಾತುಗಳು
ಸಾಗರದಾಚೆಗೂ ನಿಲುಕದ
ಸಾವಿರಾರು ಆಸೆಗಳು
ಅಳಿಸದೆ ಉಳಿದಿರುವ
ಹಲವಾರು ನಂಬಿಕೆಗಳು 

ನಾವು ಕಟ್ಟಿದಾ
ಕನಸಿನ ಗೋಪುರದಲ್ಲಿ
ನನ್ನ ಪುಟ್ಟ ಹೃದಯವನಿಟ್ಟು
ನೆನಪುಗಳ ನೆನೆಯುತ
ಕಳೆಯುತಿರುವೆ ದಿನಗಳನ್ನು
ಕಾಯುತಿರುವೆ ದಿನಗಳಿಗಾಗಿ 



Nothing is ever really lost to us as long as we remember it.
― L.M. MontgomeryThe Story Girl