Wednesday, 12 May 2021

ಪುಟ್ಟ ಆಸೆರೆಯ ಗೂಡು 

ಸುಂದರ ತೋಟ ಸುತ್ತಲೂ ಹಸಿರು ದಿನ ಬೆಳಗಾದರೆ ಹಕ್ಕಿಗಳ ಇಂಚರ ನಾದ ಮನಸಿಗೂ ಹಿತ ಕಣ್ಣಿಗೂ ತಂಪು ಅದರ ಮದ್ಯೆ ಒಂದು ಪುಟ್ಟ ಗೂಡು wow ನೋಡಲು ಬಲು ಸುಂದರ ಮತ್ತು ಕುತೂಹಲ. ಹೀಗೆ ನನ್ನ ಕಣ್ಣಿಗೆ ಬಿದ್ದ ಒಂದು ಪುಟ್ಟ ಗೂಡು ಅದರಿಂದ ಕೆಲವಂದಿಷ್ಟು ವಿಚಾರಗಳ ಅನಾವರಣೆ ಮಾಡಬೇಕ್ಕೆನ್ನುವ ಕುತೂಹಲದೊಂದಿಗೆ ಈ ಬರವಣಿಗೆ.

ನೋಡಲು ಬಲು ಸುಂದರ 
ಪ್ರಕೃತಿಗೆ ಸೊಬಗು 
ಜಗಕೆ ಬೆರಗು 

ಹಮ್ಮು ಬಿಮ್ಮುಗಳ ಗೊಂದಲವಿಲ್ಲ 
ಬಣ್ಣಗಳ ಅಲಂಕಾರವಿಲ್ಲ 
ಇಂಜಿನೀಯರಗಳ ಸಹಕಾರವಿಲ್ಲ 
ನಿರ್ಮಾಣದ ಚಿಂತೆಇಲ್ಲ 
ನನ್ನ ಸೌದಕೆ ನಾನೇ ರಾಣಿ 

ಚಿಕ್ಕದಾದ್ರು ಚೊಕ್ಕವಾಗಿ 
ಯಾರಿಗೂ ಅಂಜದೆ 
ಮನದ ಅರಸನಾಗಿ 
ಪುಟ್ಟ ಕಂದಗಳ ಕನಸಾಗಿ 
ಜವಾಬ್ದಾರಿಯ ಬೆಳಕಾಗಿ 
ಯಾರಿಗೂ ಬಗ್ಗದೆ ಜಗ್ಗದೆ 
ಸವಾಲೆಸದು ನಿರ್ಮಿಸುವ 
ನನ್ನ ಭವ್ಯ ಭವನಕೆ 
ಎಲ್ಲರಿಗು welcome 

ನಿಜ ಮನುಜನಿಗೂ ಪಕ್ಷಿ ಪ್ರಪಂಚಕ್ಕೂ ಎಷ್ಟೊಂದು ವ್ಯೆತ್ಯಾಸ.  ನಮ್ಮ ಜಗದಲ್ಲಿ ಎಲ್ಲ ರೀತಿಯ ಜನರುಂಟು ಅದರಲ್ಲೂ ಎಲ್ಲರದು ಒಂದೇ ಕನಸು ನನ್ನದೊಂದು ಪುಟ್ಟ ಮನೆ ಇರಬೇಕು ಅದಕೆ ಬಣ್ಣಗಳ ಅಲಂಕಾರವಿರಬೇಕು, ಆ ಕನಸಿಗೆ ನೂರು ಸಮಸ್ಯೆಗಳು ಸೈಟ್ ಹುಡುಕುವ ಕಾದಾಟ ನಂತರ ಮನೆ ಕಟ್ಟಿಸುವ ರಾದ್ದಂತ, ಅಂತೂ ಇಂತೂ ಕಟ್ಟಿಸಿದ ನಂತರ ನೆಂಟರೆಲ್ಲಾ ಕರೆದು ತೋರಿಸುವ ಬಿಗುಮಾನ, ಹಾಗ ಆಯಿತು ಹೀಗ ಆಯ್ತು ಎನ್ನುವ ಒಂದಿಷ್ಟು ಮಾತುಗಳು ಮನುಷ್ಯನ ಚಿಂತೆಗಳಿಗೆ ಸಮಸ್ಯೆಗಳಿಗೆ ಗೊಂದಲಗಳಿಗೆ ಕೊನೆ ಇಲ್ಲ ಮನಸಿಗೆ ಸಮಾಧಾನವಿಲ್ಲ.

ಆದರೆ ಅದೇ ಪಕ್ಷಿಗಳ ಪ್ರಾಣಿಗಳ ಲೋಕ ಬಲು ಸುಂದರ ಮನೆ ಕಟ್ಟಲು ಹಣದ ಅವಶ್ಯೆಕತೆ ಇಲ್ಲ, ಇಂಜಿನೀಯರ ಸಹಕಾರವಿಲ್ಲ, ಬಣ್ಣಗಳಿಂದ ಅಲಂಕಾರ ಮಾಡುವ ಗೊಂದಲವಿಲ್ಲ, ಹಮ್ಮು ಬಿಮ್ಮುಗಳ ಬಿಗುಮಾನ ಇಲ್ಲ, ಹೆಸರು ಹುಡುಕುವ ಪ್ರಮೇಯವಿಲ್ಲ, most important ಸಾಲ ತೀರುಸುವ ಜವಾಬ್ದಾರಿ ಇಲ್ಲ, ಆದರೂ ಎಲ್ಲರಿಗೂ ಸವಾಲೆಸದು ಪ್ರಕೃತಿಗೆ ಮೆರಗಾಗಿ, ಕಣ್ಣಿಗೆ ಸೊಗಸಾಗಿ ಎಲ್ಲರನ್ನು ತನ್ನತ್ತ ಸೆಳೆವ, ತನ್ನ ಮನೆ ತಾನೇ ಸ್ವಾವಲಂಬಿಯಾಗಿ ನಿರ್ಮಾಣ ಮಾಡುವ ಆ talent ಗೆ ಒಂದು ಸಲಾಂ. 

You'll have a lot more respect for a bird after you try making a nest. Cynthia Lewis




Friday, 19 March 2021

ಚೆಲುವೆಗೆ ಸರಿಸಾಟಿ ಯಾರಾದರುಂಟೆ ?

ತುಂಬಾ ದಿನಗಳ ನಂತರ ಬರವಣಿಗೆಗೆ ಒoದು touch ಕೊಡ್ಬೇಕೆನ್ನೆಸಿದಾಗ ನನಪಿಗೆ ಬಂದಿದ್ದು ಪ್ರಕೃತಿಯ ಸೌಂದರ್ಯ. ಎಷ್ಟೇ ಒತ್ತಡಗಳ ಮದ್ಯೆ ralax change ಬೇಕೆನಿಸಿದಾಗ ಒoದು ಸುಂದರ place ಸುತ್ತಲೂ ಅಚ್ಚ ಹಸಿರು ಜಗತ್ತಿನ ತುಂಬೆಲ್ಲ ಇರುವ ಬಣ್ಣ ಬಣ್ಣದ ಹೂವ್ಗಳು ಚಿಲಿಪಿಲಿ  ಚಿಲಿಪಿಲಿ  ಹಕ್ಕಿಗಳ ಕಲರವ ಆಗಾಗ ಇಂಪಾಗಿ ಕೂಗುವ ಕೋಗಿಲೆಯ ನಾದ ಮದ್ಯೆ ಜುಳು ಜುಳು ಹರಿಯುವ ನೀರಿನ ಸೊಬಗು, ಸ್ವಲ್ಪ ಹೊತ್ತು ಕಣ್ಣ್ ಮುಚ್ಚಿ ಕುಳಿತರೆ ವಾವ! ಇನ್ನೇನ ಬೇಕು ಸಂತೋಷಕ್ಕೆ ಮನಸಿನ ನೆಮ್ಮದಿಗೆ. 


ನಾನು ಜಗಕೆ ಸುಂದರಿ 
ನಾನಿರುವೆ ಎಲ್ಲೆಡೆ 
ಹಳದಿ ಕೆಂಪು ಬಿಳಿ 
ತಿಳಿ ಗುಲಾಬಿ ನನ್ನ ಛಾಯೆ 
ಹೇಳೇ ಗೆಳತೀ ಯಾರದರುಂಟೆ 
ಜಗದಿ ನನ್ನ ಸೋಲಿಸುವವರು 

ನಾನಿರುವ ಕಡೆ ಪರಿಮಳಕೆ ಕೊನೆಇಲ್ಲ 
ಪ್ರೀತಿಗೆ ನಾನೇ ರಾಣಿ 
ಚೆಲುವೆಗೆ ನಾನೇ ಮಹಾರಾಣಿ 
ನೋಡಿದೊಡನೆ ವಾವ !
ಎನ್ನುವ ಉದ್ಗಾರ 
ಹೇಳೇ ಗೆಳತೀ ಯಾರದರುಂಟೆ   
ಜಗದಿ ನನ್ನ ದ್ವೇಷೀಸುವವರು 

ಪ್ರೀತಿಗೊಂದು ಬಣ್ಣ 
ಸ್ನೇಹಕ್ಕೊಂದು ಬಣ್ಣ 
ಶತ್ರುಗಳ ಮನದಲ್ಲಿ 
ಪ್ರೀತಿಯ ಹೊಂಬಣ್ಣ 
ಮರಳುಸುವ ನನ್ನ ಶಕ್ತಿಗೆ 
ಸರಿಸಾಟಿ ಯಾರಾದರುಂಟೆ 
ಹೇಳೇ ಗೆಳತೀ 

ಆದರೆ ಖೇದ ಪಡುವ ವಿಷಯ ಈಗಿನ fast going ಜಗತ್ತಲ್ಲಿ ಡೆವಲಪ್ಮೆಂಟ್ ಹೆಸರಲ್ಲಿ ಅದೆಷ್ಟೋ ನಿಸರ್ಗದ ನಾಶ ಆಗತಿರೋದು. ನಾವೆಲ್ಲರೂ ಒಂದು ಹೆಜ್ಜೆ ಮುಂದಿಟ್ಟು ನಮ್ಮಲ್ಲಿರುವ ಗಿಡಮರಗಳ ಉಳಿವಿನ ಕಡೆ ಗಮನ ಹರಿಸಿದರೆ ಸುಂದರ ನಿಸರ್ಗದ ಸ್ವರ್ಗ ನಿರ್ಮಾಣವಾಂದತೆ ಆಗುತ್ತದೆ. 

 ಒಂದು ಸುಂದರ ಪ್ರಕೃತಿಯ ಸೊಬಗು ನಿನ್ನ ಬದಲಾವಣೆಯ ಬಿಂದು