ಅದೆಲ್ಲೋ ನೋಡಿದ ನೆನಪು, ಮತ್ತೆ ಮತ್ತೆ ಅದೇ ಭಾವಗಳು ಮನದ ಮೂಲೆಯಲ್ಲಿ ಬೆಟ್ಟದಷ್ಟು ನಿರೀಕ್ಷೆಗಳ ಮುಗಿಲೆರುತ್ತಿವೆ. ಬೇಡವೆಂದರೂ ಬಯಕೆಗಳು ನಾ ಮುಂದು ತಾ ಮುಂದೆನ್ನುವ ಸಂಘರ್ಷದ ಆಟಕ್ಕೆ ಮುಖ ಮಾಡಿ ಓಡುತ್ತಿವೆ. ಕಾರಣವಿಲ್ಲದೆ ನಗುತಿರುವ ಮನ, ಅಂದದರಮನೆಯಲ್ಲಿ ಹೊಸ ಹೊಸ ಬಣ್ಣಗಳ ಹೋತ್ತು ನಲಿದಾಡುವ ಆತುರಕೆ ಸಜ್ಜಾಗಿರುವ ಅರಳಿನಿಂತ ಹೂವಗಳು, ಆಫ್ರಿಕಾ ಖಂಡದ ಖಗ್ಗತ್ತೆಲೆಯ ನಾಡಲ್ಲಿ ಸೂರ್ಯನ ಇಣುಕು ನೋಟ, ಬರಗಾಲದಲ್ಲಿ ಓಯಾಸಿಸ್ ಸಿಕ್ಕಂತೆ ಕುಪ್ಪುಳುಸುತ್ತಿರುವ ಹೃದಯ.
ಬೆಟ್ಟದಾಚೆ ನಸುನಗುತ್ತ ನಿಂತ ಚಂದ್ರ ಮನೆಂಗಳದಲ್ಲಿ ಬೆಳಕು ಚೆಲ್ಲಿ ಜಗತ್ತೇ ಒಂದಾದ ಅನುಭವ, ಕಾಣದ ಕನಸೊಂದು ಬಾನೆತ್ತರದ ಆಸೆಗಳ ದೋಣಿಯನೇರಿ ಹುಡುಕಾಟದ ಪರ್ವಕೆ ಸಾಗುತಿದೆ ಎಡೆಇಲ್ಲದೆ. ಕಲ್ಲಿರಿಲಿ ಮುಳ್ಳಿರಲಿ ಬದುಕಿನ ಹಾದಿಯಲಿ ನಾ ನಡೆವೆ ಛಲದಿ ಎಂದು ಬಿಗುತಿದೆ ಹುಚ್ಚು ಕುದುರೆಯ ಮನಸ್ಸು. ಈ ಕನಸಿನ ಹಾದಿಯಲ್ಲಿ ಜಯವೋ ಅಪಜಯವೋ ಅರಿಯದೆ ಮುನ್ನುಗ್ಗುತ್ತಿದೆ ಅಳುಕದೆ ಅಂಜದೆ.
ಚೈತ್ರದ ಸೊಬಗು ಮಾಸುವ ಮುನ್ನ ಮುಂಗಾರಿನ ಸಿಂಚನ ಹೊಸ ಇತಿಹಾಸಕ್ಕೆ ಮುನ್ನುಡಿ ಹಾಡುವ ಆತುರ. ಅಕ್ಷರ ಸಹ ಮರೆತು ಹೋಗಿದ್ದ ಸ್ನೇಹಕ್ಕೆ ಸಂಕೋಲೆಯ ಕೈ ಚಾಚಿದ್ದು ಫೇಸ್ ಬುಕ್ ನ ಆ ನಯನಗಳು. ಈ ಒಂದು ನೋಟ ಬದಲಾವಣೆಗೆ ಹಾದಿ ಆಗಿರುವದು ವಿಪರ್ಯಾಸ. ಬಹುಶ: ಇಂತಹ ಅನುಭವ ಅನೇಕರಿಗೆ ಆಗಿರಬಹುದು ಎನ್ನುವದು ನನ್ನ ಅಂಬೋಣ. ಕಲ್ಪೆನೆಯ ನೋಟದೊಂದಿಗೆ ನಡೆಯುತ್ತಿರಲಿ ಬದುಕು ನಿರಂತರ. ಸೋಶಿಯಲ್ ನೆಟ್ ವರ್ಕ್ ನೊಂದಿಗೆ ಇರಲಿ ಸ್ನೇಹ ನಿತ್ಯ ನಿರಂತರ.

ಬಚ್ಚಿಟ್ಟ ಕಪ್ಪೆ ಚಿಪ್ಪೊಳಗಿನ
ಮುತ್ತಂತೆ ನನ್ನವಳ ನಯನ
ನೀಲಿ ಆಗಸದಿ
ಹೊಳೆವ ನಕ್ಷತ್ರದಂತೆ
ಅದೊರಳಿಗಿನ ಕಾಂತಿ
ಆಸೆಗಳ ಕಡಲಲ್ಲಿ
ಕನಸುಗಳ ಬಿತ್ತಿ
ಬಾನಾಡಿ ಚಂದ್ರಮನ
ಭಾವಕ್ಕೆ ಬಯಸಿಹ
ಮಲ್ಲಿಗೆಯ ಭ್ರಾಂತಿ
ಬೆಳ್ಳೆನೆಯ ಹೊದಿಕೆಯಲಿ
ಕಪ್ಪಿಟ್ಟ ಬೊಟ್ಟು
ಮಿರಮಿರನೆ ಹೊಳೆವ
ಅದರೊಳಗಿನ ಒಲವು
ನನ್ನವಳ ಚೆಲುವು
ಅಲ್ಲೊಮ್ಮೆ ಇಲ್ಲೊಮ್ಮೆ
ಕ್ಷಣ ಕ್ಷಣಕು ಸರಿದಾಡಿ
ಆ ನೋಟ ಈ ನೋಟ
ಜಗವೆಲ್ಲ ಸುತ್ತಾಡಿ
ಈ ಮೊಗಕೆ
ನಾ ಸುಂದರಿ
ಕಣ್ಣಸನ್ನೆಗೆ ನಾ ರಾಣಿ
ಬೀಗಿ ಮೆರದಾಡಿ
ಈ ನಯನಗಳೇ ಸಾಟಿ
ನನ್ನವಳ ನುಡಿಗೆ
ಕಣ್ಣೋಟ ಕುಡಿಗೆ
Love is blind; friendship closes its eyes. - Friedrich Nietzsche