Monday, 31 March 2014

ಸಂಜೆಯ ಸವಿನೆನಪಿನೊಂದಿಗೆ ದಿನ

ಎಲ್ಲೆಲ್ಲೂ ಹಸಿರಿನ ಸೊಬಗು ಕಣ್ಣಮನ ಸೆಳೆಯುವ ಸೌಂದರ್ಯ ಪ್ರಕೃತಿಯ ಚೆಲುವಿಗೆ ರೆಕ್ಕೆಬಿಚ್ಚಿದ ಪಕ್ಷಿಯ ಹಾಗೆ ಕುಣಿದಾಡುವ ಮನ ಅದರ ನಡುವೆ ಜುಳು ಜುಳು ಹರಿವ ಸಣ್ಣ ಗಂಗೆಯ ವಡಲು ಜೊತೆಗೆ ನನ್ನೊಂದಿಗೆ ಕೈ ಹಿಡುದು ನಡೆಸುತ್ತೇನೆ ಎನ್ನುವ ಪುಟ್ಟ ಹೃದಯದ ಮಾತು ಆಹಾ!!!!!! ಸ್ವರ್ಗಕ್ಕೆ ನಾಕೆ ಗೇಣು ಎನ್ನುವ ಮನದಾಳ........ ಅದೇಕೋ ತುಂಬಾ ನೆನಪಾಗುತ್ತಿದೆ ಇವತ್ತು ಬಹುಶ ಇದೇ ಹಬ್ಬದ ದಿನ ಅಂತ ಕಾಣುತ್ತೆ ನಾವಿಬ್ಬರು ಭೇಟೆ ಆದ ಸವಿನೆನಪಿನ ದಿನ. ಮನಸೇ ಹಾಗೆ 

ಮನಸೊಂದು ಬಣ್ಣದ ಮೂಟೆ 
ಅದರ ಮುಖಗಳು ಹಲವಾರು
ನೋಡುವ ಕಣ್ಣಗಳು ನೂರಾರು
ಬಯಸುವ ಬಯಕೆಗಳು ಹತ್ತಾರು 
ಮನದೊಳಗಿರುವ ಮಾತುಗಳು ಸಾವಿರಾರು 
ಹೃದಯಕ್ಕೆ ನಿಲುಕುವವು ಹದಿನಾರು 

ಅದೆಷ್ಟು ಚೆನ್ನಾಗಿತ್ತು ನಾವು ಕಳೆದ ದಿನಗಳು, ಊರು ನಿನಗೆ ಹೊಸದೇನಲ್ಲ ಆದರೆ ನನಗೆ ಎಲ್ಲವು ಹೊಸದು ಹಸಿರಿಗೆ ನಾನು ಸೋತುಹೊಗಿದ್ದೆ ಹಾಗೆ ಕೂಡ ನಿನಗೇನೂ ಇರಬಹುದು. ಸಿಟಿಗೆ ಹತ್ತಿರವಾದ ಊರು ಆದರು ಅದೇಕೋ ಕಾಣೆ ಬಸ್ಸಿನ ಸೌಲಬ್ಯ ಮಾತ್ರ ಶೂನ್ಯ ನದಿ ದಾಟಿ ಪ್ರತಿಯೊಂದಕ್ಕು ಹೋಗ ಬೇಕಾದ ಅನಿವಾರ್ಯತೆ. ನಿಜ, ಇದೇ ಆಲ್ಲೆವೆ ನಮ್ಮ ದೇಶದ ಪರಿಸ್ಥಿತಿ ಅದೆಷ್ಟು ಹಳ್ಳಿಗಳು ಇನ್ನು ಕೂಡಾ ಮನುಷ್ಯನ ದಿನನಿತ್ಯದ ಅವಶ್ಯಕತೆಗೆ ಬೇಕಾದ ಸೌಲ್ಯಭ್ಯಗಳನ್ನ ಕಂಡಿಲ್ಲ. ವಿಪರ್ಯಾಸ ಅಂದರೆ technology, development ಅನ್ನುವ ಪದಗಳು ಕೇವಲ ಬೇರೆಳೆನಿಕೆಯ ಹಳ್ಳಿ, ಸಿಟಿಗಳಿಗೆ ಸ್ಥಿಮಿಥವಾಗಿರೋದು.ಆದರೆ ಸ್ನೇಹಕ್ಕೆ ಸಾಕ್ಷಿಯಾಗಿದ್ದು ಮಾತ್ರ ಅದೇ ದಾರಿ ಅಂದರೆ ತಪ್ಪಾಗಲಾರದು





ಆದೆ ಮೊದಲನೆ ದಿನ ಕಾಲೇಜಿಗೆ ನಾನು ಮತ್ತು ನನ್ನ ಗೆಳತಿಯರ ಜೊತೆ ದೋಣಿಯಲ್ಲಿ ಸಾಗಿ ದಡ ಸೇರುವ ಪ್ರಯತ್ನದಲ್ಲಿ ಇದ್ದೆವು ಆಗ ನನ್ನ ಕಣ್ಣನ್ನು ಸೆಳೆದಿದ್ದು ನೀನು. ಕ್ಲಾಸಿಗೆ entry ಕೊಟ್ಟ ಮೇಲೆ ಗೊತ್ತಾಗಿದ್ದು ನೀಂದು ಕೂಡಾ ಆದೇ ಕಾಲೇಜೆಂದು. ನಿಜ ಹೇಳತೆನಿ ಮೂರು ವರುಷ ಕಳೆದರು ಒಂದು ಮಾತು ಕೂಡ ಆಡಿರಲಿಲ್ಲ ಆದರೂ ಕಣ್ಣು ಮಾತ್ರ ನಿನ್ನನ್ನು ಹುಡುಕುತ್ತಿದ್ದವು ಅದೇಕೋ. ನೀನು ಕೂಡ ಅದಕ್ಕೆ ಹೊರತಾಗಿರಲ್ಲಿಲ್ಲ ಅಂತ ಅಂದುಕೊಳ್ಳುತ್ತೇನೆ. ಮನದಲ್ಲಿ ನೂರಾರು ಭಾವನೆಗಳನ್ನ ಹುಟ್ಟು ಹಾಕಿ, ಹೃದಯ ಮೂಲೆಯಲ್ಲೇ ಮನೆ ಮಾಡಿತ್ತು ನೋಟ

ಸುತ್ತಲು ಹುಡುಕಾಟ 
ಮುಗ್ದ ಮನಸಿನ ಹೊಯ್ದಾಟ 
ದೂರದ ಕನ್ನಸನ್ನೆಯ ನೋಟ 
ನಾಚಿ ನಲುಗುತಿರುವ ಮನದಾಟ
ಅರಿಯದ ಪ್ರೀತಿಯ ಪರದಾಟ 

ಅದ್ದೆಸ್ಟೋ ನೋವನ್ನು ಮರೆಸಿ ಹೊಸ ಹೊಸ ಕನಸುಗಳ್ಳನ್ನ ಮೂಡುವ ಹಾಗೆ ಮಾಡಿದ್ದೇ ಸ್ನೇಹ. ಮನಸೇ ಹಾಗಲ್ಲವೇ ಬಣ್ಣಗಳ ಮೂಟೆ, ಪ್ರೀತಿ ಹತ್ತಿರ ಇದ್ದಾಗ ಜಗತ್ತನ್ನೇ ಗೆದ್ದ ಆನಂದ, ಕಾಣದ ದಿನ ಚಿಂತೆಗಳ ಸಾಗರ.  Really, ದಿನ ನೀನು ಬರದೆ ಇದ್ದಾಗ ಕಳೆದ ಒಂದೊಂದು ಕ್ಷಣವೂ ಯುಗಗಳಾಗಿತ್ತು. ಈಡಿ ದಿನವನ್ನ ದಡದ ಬದಿಯಲ್ಲೇ ಕಳದಿದ್ದೆ. ಕೊನೆಗೂ ನಮ್ಮ ಇಬ್ಬರ ಮೌನದ ಮಾತಿಗೆ ಕೊನೆಹಾಡಿದ್ದು ಕಾಲೇಜಿನ ಕೊನೆಯ  ದಿನದ ಸಂಜೆಯ ಸವಿಗಳಿಗೆ

ಹೇಗೆ ಮರೆಯಲಿ ದಿನಗಳನ್ನ
ನೀನ ಆಡಿದ ಮಾತುಗಳು
ಅಚ್ಚ ಅಳಿಯದೆ ಉಳಿದಿವೆ
ನನ್ನ ಹೃದಯದಲ್ಲಿ 

ಮರೆತರು ಮರೆಯದಿರುವ
ನೂರಾರು ಮಾತುಗಳು
ಸಾಗರದಾಚೆಗೂ ನಿಲುಕದ
ಸಾವಿರಾರು ಆಸೆಗಳು
ಅಳಿಸದೆ ಉಳಿದಿರುವ
ಹಲವಾರು ನಂಬಿಕೆಗಳು 

ನಾವು ಕಟ್ಟಿದಾ
ಕನಸಿನ ಗೋಪುರದಲ್ಲಿ
ನನ್ನ ಪುಟ್ಟ ಹೃದಯವನಿಟ್ಟು
ನೆನಪುಗಳ ನೆನೆಯುತ
ಕಳೆಯುತಿರುವೆ ದಿನಗಳನ್ನು
ಕಾಯುತಿರುವೆ ದಿನಗಳಿಗಾಗಿ 



Nothing is ever really lost to us as long as we remember it.
― L.M. MontgomeryThe Story Girl

Sunday, 1 September 2013

ಯಾರು ನೀನು ????

ಯಾರು ಯಾರು ??????? ಕಾಣದ ಊರಿಲ್ಲ  ಇರದ ಜಾಗವಿಲ್ಲ ಒಮ್ಮೆ ಇತ್ತ ಒಮ್ಮೆ ಸುತ್ತ ಜಗದ ತುಂಬೆಲ್ಲ ನಿನ್ನದೆ ಸಾಮ್ರಾಜ್ಯ. ಹಗಿಲಿರಲಿ, ಇರುಳಿರಲಿ ಎತ್ತ ನೋಡಿದರು ನೆರಳಂತೆ ಹಿಂಬಾಲಿಸುವೆ. ತಪ್ಪಿಸಿಕೊಳ್ಳುವ ಜಾಣ್ಮೆ, ಮಿಂಚಿನ ಓಟ, ಯಾರ ಹಂಗಿಲ್ಲದೆ, ಬೇದ ಭಾವ ಎಣಿಸದೆ ಬೇರೆಯುವ ನಿನ್ನ ಸ್ವಭಾವಕೆ ಒಂದು ನಮಸ್ಕಾರ. ನಾ ಸತ್ತರು ಪರವಾಗಿಲ್ಲ ನನ್ನ ಬಂದು ಬಳಗಕ್ಕೆ ಕೊನೆಯಿಲ್ಲ ಎನ್ನುವ ಅಹಂಕಾರ. ತುಂಬಾ ಇಸ್ಟ ಪಡುವ ಸಂಗತಿ ನೀನು ಕೊಡುವ intimation ಯಾವ ಸಂಗೀತ ಸ್ವರಕ್ಕೂ ಮಿಗಿಲಾದುದು. ಅರೆನಿದ್ದೆಯಲ್ಲೂ ಬಡಿದೆಬ್ಬಿಸಿ ನಿನ್ನ ಕಾಣುವ ತವಕ ಸೃಷ್ಟಿಸುವ ಅಲರಾಮ god. ಆ ನಿನ್ನ ಒಂದು ಸ್ಪರ್ಶ ಅದೆಂತ ಮರೆಯದ ಸೆಳೆತ. ಏಚ್ಚರ friends ಇಂತ ಅನುಭವ ಖಂಡಿತ ನಿಮ್ಮ ಗಮನಕ್ಕೂ ಬಂದಿರಬಹುದು ಹಾಗಂತ ಮೈಮರೆತು ಸ್ನೇಹ ಬೆಳೆಸುವ ಪ್ರಯತ್ನ ಬೇಡ. 




ಯಾರೇ ನೀನು ????
ಜಗದಿ ನೂರಾರು ಗೆಳೆಯರು 
ಅರಿಯದ ಸಿರಿ
ಹುಡುಕಾಡುವ ಪರಿ 
ಮನವಾಗಿದೆ ಬುಗುರಿ 

ಹಗಲಿರಲಿ ಇರುಳಿರಲಿ 
ಬೆಂಬಿಡದ ತಿರುಗಾಟ 
ಆಹಾ!!!! ಆ ನಿನ್ನ ಸೆಳೆತ 
ನರನಾಡಿಯಲಿ ಮಿಂಚಿನ ಸೆಣಸಾಟ 

ಒಮ್ಮೆ ಅತ್ತ ಒಮ್ಮೆ ಇತ್ತ 
ಸುತ್ತಲು ಸಪ್ತ ಸ್ವರಗಳ ಗುನುಗಾಟ 
ನಿಂತರು ನಿನ್ನದೇ 
ಕುಂತರು ನಿನ್ನದೇ 
ಕೈಗೆಟುಕದ ಕುಣಿದಾಟ 
ಮಾಡಿದೆ ಮರುಳ 
ನಿನ್ನ ಈ ನಿಲುಕದ ಹಾರಾಟ. 

Saturday, 22 June 2013

ನನ್ನವಳ ನೋಟಕ್ಕೆ ರೆಕ್ಕೆ ಪುಕ್ಕ ಬಂದಾಗ

ಅದೆಲ್ಲೋ ನೋಡಿದ ನೆನಪು, ಮತ್ತೆ ಮತ್ತೆ ಅದೇ ಭಾವಗಳು ಮನದ ಮೂಲೆಯಲ್ಲಿ ಬೆಟ್ಟದಷ್ಟು ನಿರೀಕ್ಷೆಗಳ ಮುಗಿಲೆರುತ್ತಿವೆ. ಬೇಡವೆಂದರೂ ಬಯಕೆಗಳು ನಾ ಮುಂದು ತಾ ಮುಂದೆನ್ನುವ ಸಂಘರ್ಷದ ಆಟಕ್ಕೆ ಮುಖ ಮಾಡಿ ಓಡುತ್ತಿವೆ. ಕಾರಣವಿಲ್ಲದೆ ನಗುತಿರುವ ಮನ, ಅಂದದರಮನೆಯಲ್ಲಿ ಹೊಸ ಹೊಸ ಬಣ್ಣಗಳ ಹೋತ್ತು ನಲಿದಾಡುವ ಆತುರಕೆ ಸಜ್ಜಾಗಿರುವ ಅರಳಿನಿಂತ ಹೂವಗಳು, ಆಫ್ರಿಕಾ ಖಂಡದ ಖಗ್ಗತ್ತೆಲೆಯ ನಾಡಲ್ಲಿ ಸೂರ್ಯನ ಇಣುಕು ನೋಟ, ಬರಗಾಲದಲ್ಲಿ ಓಯಾಸಿಸ್  ಸಿಕ್ಕಂತೆ ಕುಪ್ಪುಳುಸುತ್ತಿರುವ ಹೃದಯ.

ಬೆಟ್ಟದಾಚೆ ನಸುನಗುತ್ತ ನಿಂತ ಚಂದ್ರ ಮನೆಂಗಳದಲ್ಲಿ ಬೆಳಕು ಚೆಲ್ಲಿ ಜಗತ್ತೇ ಒಂದಾದ ಅನುಭವ, ಕಾಣದ ಕನಸೊಂದು ಬಾನೆತ್ತರದ ಆಸೆಗಳ ದೋಣಿಯನೇರಿ ಹುಡುಕಾಟದ ಪರ್ವಕೆ ಸಾಗುತಿದೆ ಎಡೆಇಲ್ಲದೆ. ಕಲ್ಲಿರಿಲಿ ಮುಳ್ಳಿರಲಿ ಬದುಕಿನ ಹಾದಿಯಲಿ ನಾ ನಡೆವೆ ಛಲದಿ ಎಂದು ಬಿಗುತಿದೆ ಹುಚ್ಚು ಕುದುರೆಯ ಮನಸ್ಸು. ಈ ಕನಸಿನ ಹಾದಿಯಲ್ಲಿ ಜಯವೋ ಅಪಜಯವೋ ಅರಿಯದೆ ಮುನ್ನುಗ್ಗುತ್ತಿದೆ ಅಳುಕದೆ ಅಂಜದೆ. 

ಚೈತ್ರದ ಸೊಬಗು ಮಾಸುವ ಮುನ್ನ ಮುಂಗಾರಿನ ಸಿಂಚನ ಹೊಸ ಇತಿಹಾಸಕ್ಕೆ ಮುನ್ನುಡಿ ಹಾಡುವ ಆತುರ. ಅಕ್ಷರ ಸಹ ಮರೆತು ಹೋಗಿದ್ದ ಸ್ನೇಹಕ್ಕೆ ಸಂಕೋಲೆಯ ಕೈ ಚಾಚಿದ್ದು ಫೇಸ್ ಬುಕ್ ನ ಆ ನಯನಗಳು. ಈ ಒಂದು ನೋಟ ಬದಲಾವಣೆಗೆ ಹಾದಿ ಆಗಿರುವದು ವಿಪರ್ಯಾಸ. ಬಹುಶ: ಇಂತಹ ಅನುಭವ ಅನೇಕರಿಗೆ ಆಗಿರಬಹುದು ಎನ್ನುವದು ನನ್ನ ಅಂಬೋಣ. ಕಲ್ಪೆನೆಯ ನೋಟದೊಂದಿಗೆ ನಡೆಯುತ್ತಿರಲಿ ಬದುಕು ನಿರಂತರ. ಸೋಶಿಯಲ್ ನೆಟ್ ವರ್ಕ್ ನೊಂದಿಗೆ ಇರಲಿ ಸ್ನೇಹ ನಿತ್ಯ ನಿರಂತರ. 





ಮರಳ ಒಡಲಲಿ 
ಬಚ್ಚಿಟ್ಟ ಕಪ್ಪೆ ಚಿಪ್ಪೊಳಗಿನ 
ಮುತ್ತಂತೆ ನನ್ನವಳ ನಯನ 
ನೀಲಿ ಆಗಸದಿ 
ಹೊಳೆವ ನಕ್ಷತ್ರದಂತೆ 
ಅದೊರಳಿಗಿನ ಕಾಂತಿ 

ಆಸೆಗಳ ಕಡಲಲ್ಲಿ 

ಕನಸುಗಳ ಬಿತ್ತಿ 
ಬಾನಾಡಿ ಚಂದ್ರಮನ 
ಭಾವಕ್ಕೆ ಬಯಸಿಹ 
ಮಲ್ಲಿಗೆಯ ಭ್ರಾಂತಿ 


ಬೆಳ್ಳೆನೆಯ ಹೊದಿಕೆಯಲಿ 

ಕಪ್ಪಿಟ್ಟ ಬೊಟ್ಟು 
ಮಿರಮಿರನೆ ಹೊಳೆವ 
ಅದರೊಳಗಿನ ಒಲವು 
ನನ್ನವಳ ಚೆಲುವು 


ಅಲ್ಲೊಮ್ಮೆ ಇಲ್ಲೊಮ್ಮೆ 

ಕ್ಷಣ ಕ್ಷಣಕು ಸರಿದಾಡಿ 
ಆ ನೋಟ ಈ ನೋಟ 
ಜಗವೆಲ್ಲ ಸುತ್ತಾಡಿ 
ಈ ಮೊಗಕೆ 
ನಾ ಸುಂದರಿ 
ಕಣ್ಣಸನ್ನೆಗೆ ನಾ ರಾಣಿ 
ಬೀಗಿ ಮೆರದಾಡಿ 
ಈ ನಯನಗಳೇ ಸಾಟಿ 
ನನ್ನವಳ ನುಡಿಗೆ 
ಕಣ್ಣೋಟ ಕುಡಿಗೆ 


Love is blind; friendship closes its eyes. - Friedrich Nietzsche
 

 






Sunday, 31 March 2013

ಬದಲಾದ ಬದುಕಿನೊಂದಿಗೆ ಹೆಜ್ಜೆ

ಏನೋ ಆತುರ, ಲಗುಬಗೆ ಇಂದ ಗೂಡು ಸೇರುವ ತವಕ, ಸುತ್ತಲೂ ನೂರಾರು ಕಿತ್ತುತಿನ್ನುವ ಕಣ್ಣಗಳ ನೋಟ ಮನದಲ್ಲಿ ದುಗುಡ ತನಗೆಅರಿವಿಲ್ಲದೆ ಓಡುತ್ತಿರುವ ಹೆಜ್ಜೆಗಳು ಸುತ್ತುಮುತ್ತಲು ನಮ್ಮವರಿಗಾಗಿ ಹುಡುಕಾಟ. ಬೇಗ ಕತ್ತಲು ಆವರಿಸದಿರಲಿ ಎನ್ನುವ ವಿನಂತಿಗಳ ಸುರಿಮಳೆಯೊಂದಿಗೆ ಬಸ್ ಗಾಗಿ ಕಾದ ಮನ. ಈ ಹಾಳಾದ ಬಸ್ ಗಳು ಸರಿಯಾದ ಟೈಮ್ ಗೆ ಬರದೆ ಸತಾಯಿಸುತ್ತವೆ ಏನ್ನುವ ಗೊಣಗಾಟ. ಅಬ್ಬಾ! ಎಂಬ ನಿಟ್ಟುಸಿರುನೊಂದಿಗೆ ಸಿಟ್ ಏರಿ ಕುಳಿತು ಸುತ್ತಲು ಬಸ್ ನಲ್ಲಿ ಜನ ಸಂಖ್ಯೆಯ ಲೆಕ್ಕಾಚಾರ. ಇತ್ತಿಚಿನ ರಕ್ಷಣೆ ಇಲ್ಲದ ಬದುಕಿನಲ್ಲಿ ನಿತ್ಯ ಭಯದ ನೆರಳಲ್ಲಿ ಸಾಗುತ್ತಿರುವ ಜೀವನದ ಕಲ್ಪನೆ ತುಂಬಾ ವಿಶಾದನೀಯ. ಹೆಣ್ಣಾಗಿ ಹುಟ್ಟುವದೆ ತಪ್ಪಾ ???? ನಿಜವಾಗಿ ಹೆಣ್ಣಿಗೆ ಸ್ವಾತಂತ್ರವಿದೆಯಾ ???? ಇದ್ದರೆ ಅದೆಸ್ಟರಮಟ್ಟಿಗೆ ಪರಿಪೂರ್ಣ????? ವಯಸ್ಸಿನ ಮಿತಿಯಿಲ್ಲದೇನೆ ನಡೆಯುತ್ತಿರುವ ಅನಾಚಾರಗಳಿಗೆ ಯಾರು ಹೊಣೆ ????? ಸಮಾಜನಾ???? ಬದಲಾಗುತ್ತಿರುವ ಸಂಸ್ಕೃತಿಯಾ ???? ವೀವೇಚನೆ ಇಲ್ಲದೆ ಮೃಗದಂತೆ ವರ್ತಿಸುತ್ತಿರುವ ಮನುಜನ ಮನಸ್ಸಾ ????? ಹೀಗೆ ಮನದಲ್ಲಿ ಸಾವಿರಾರು ಪ್ರಶ್ನೆಗಳ ಸುರಿಮಳೆಯೊಂದಿಗೆ ಕಣ್ಣು ಮುಚ್ಚ್ಚಿದಾಗ ತಟ್ಟನೆ ಡ್ರೈವರ್ ನ ಬ್ರೇಕ್ ಗಿರೀಕಿ ಹೊಡೆಯುತ್ತಿದ್ದ ಮೈಂಡ್ ಗೆ ಫುಲ್ stop ಹಾಕಿದ್ದು. ಟ್ರೀನ್ ಟ್ರೀನ್........... hallo .......... ಬರ್ತಾ ಇದ್ದೇನಿ ಹತ್ತು ನಿಮಿಷದಲ್ಲಿ ಏರ್ತೆನಿ. 


ಉತ್ತರವಿಲ್ಲದ ಸಾವಿರಾರು ಪ್ರಶ್ನೆಗಳು
ಬಿಡಿಸಲಾಗದ  ನೂರಾರು ಸಮಸ್ಯೆಗಳು
ಮರೆಯದ ಹಲವಾರು ನೆನಪುಗಳು
ಕೊನೆಯಿರದ ಬದುಕಿನ ಆಸೆಗಳು 
ಇವೆಲ್ಲದರ ಮದ್ಯೆ ನಗು ನಗುತ ಸಾಗುತಿರುವ ಜೀವನದ ದಿನಗಳು :)

ಬಹುಶ: ಆ ದೇವರ ಆಟಗಳಿಗೆ ನಾವು ಗೊಂಬೆಗಳು ಮಾತ್ರ. ಜೀವನದ ತಿರುವಗಳಿಗೆ ಸ್ವಾವಲಂಬನೆಯ ಬದುಕಿನ ನಡೆಗೆ ಆತ್ಮಬಲದ ಹೋರಾಟಕ್ಕೆ ಪರಿಸ್ಥಿತಿಯೇ ಕೈಗನ್ನಡಿ. ಕತ್ತೆಲೆಯ ಬದುಕಿನಲ್ಲಿ ಬೆಳಕಿನ ಸಣ್ಣ ಕಿರಣುವು ಕೂಡ ಆಸರೆಯ ಕೊಂಡಿಯಂತೆ. ನೀನ ಇರದ ದಿನಾ ಬದುಕೇ ಇಲ್ಲಅಂದಿದ್ದ ಬಾಳಿಗೆ ಜವಾಬ್ದಾರಿಯ ಮುಗಿಲೇರಿ ಬಾಳದಡ ಸಾಗಿಸುವ ನೌಕೆ ನಾನಾಗಿರುವೆ. ಆ ದಿನದ ಬೇಟಿ ಜೀವನದ miss ಆಗುವದು ವಿದಿಯ ತೀರ್ಮಾನವಾಗಿತ್ತು ಅನಸುತ್ತೆ. ಕಷ್ಟದ ದಿನಗಳಿಗೆ ನಗುವಿನ ಮುಖವಾಡ. ಸಂತೋಷದ ಸವಿಗಳಿಗೆ ನೆನಪುಗಳೇ ಸಾಕಾರ. ಬದಲಾವಣೆ ಜಗದ ನಿಯಮ, ಬದಲಾದ ಬದುಕಿನೊಂದಿಗೆ ಹೆಜ್ಜೆ ಹಾಕುವದು ವಾಸ್ತವ. 






































ಬದಲಾಗದವಳು ನಾನಲ್ಲ 
ಬದಲಾವಣೆಯ ಕಾಲ ಬಂದಿಲ್ಲ 
ಅರಿಯದ ಬದಲಾವಣೆ 
ಬದುಕಿನ ಅನಿವಾರ್ಯತೆ 
ಅರಿತ ಬದಲಾವಣೆ 
ಬದುಕಿನ ಸಾರ್ತಕತೆ 


ಬಣ್ಣಗಳ ಬೆಳಕಿಗೆ 
ಬದಲಾದ ಕಲೆಗೆ 
ಚಿತ್ರಗಳ ಕಲೆಗಾರನಾಗಿ 
ಜೀವ ತುಂಬಿ ನಡೆಸುವ 
ಬದುಕಿನ ಬದಲಾವಣೆಗೆ 
ಬದಲಾಗು 


ಪ್ರೀತಿ ಮುತ್ತು ಜಾರಿದಾಗ 
ಹರಿವ ನೀರು ನಿಂತಾಗ 
ಸಂತೋಷದ ಕಡಲು ಬತ್ತಿದಾಗ 
ಭರವಸೆಯ ಕೈ ಜೊತೆಯಾದಾಗ 
ಬದಲಾಗು ಬದುಕಿನ ಪಯಣ ಬಯಸಿದಾಗ. 



God, life changes faster than you think.