Saturday, 22 June 2013

ನನ್ನವಳ ನೋಟಕ್ಕೆ ರೆಕ್ಕೆ ಪುಕ್ಕ ಬಂದಾಗ

ಅದೆಲ್ಲೋ ನೋಡಿದ ನೆನಪು, ಮತ್ತೆ ಮತ್ತೆ ಅದೇ ಭಾವಗಳು ಮನದ ಮೂಲೆಯಲ್ಲಿ ಬೆಟ್ಟದಷ್ಟು ನಿರೀಕ್ಷೆಗಳ ಮುಗಿಲೆರುತ್ತಿವೆ. ಬೇಡವೆಂದರೂ ಬಯಕೆಗಳು ನಾ ಮುಂದು ತಾ ಮುಂದೆನ್ನುವ ಸಂಘರ್ಷದ ಆಟಕ್ಕೆ ಮುಖ ಮಾಡಿ ಓಡುತ್ತಿವೆ. ಕಾರಣವಿಲ್ಲದೆ ನಗುತಿರುವ ಮನ, ಅಂದದರಮನೆಯಲ್ಲಿ ಹೊಸ ಹೊಸ ಬಣ್ಣಗಳ ಹೋತ್ತು ನಲಿದಾಡುವ ಆತುರಕೆ ಸಜ್ಜಾಗಿರುವ ಅರಳಿನಿಂತ ಹೂವಗಳು, ಆಫ್ರಿಕಾ ಖಂಡದ ಖಗ್ಗತ್ತೆಲೆಯ ನಾಡಲ್ಲಿ ಸೂರ್ಯನ ಇಣುಕು ನೋಟ, ಬರಗಾಲದಲ್ಲಿ ಓಯಾಸಿಸ್  ಸಿಕ್ಕಂತೆ ಕುಪ್ಪುಳುಸುತ್ತಿರುವ ಹೃದಯ.

ಬೆಟ್ಟದಾಚೆ ನಸುನಗುತ್ತ ನಿಂತ ಚಂದ್ರ ಮನೆಂಗಳದಲ್ಲಿ ಬೆಳಕು ಚೆಲ್ಲಿ ಜಗತ್ತೇ ಒಂದಾದ ಅನುಭವ, ಕಾಣದ ಕನಸೊಂದು ಬಾನೆತ್ತರದ ಆಸೆಗಳ ದೋಣಿಯನೇರಿ ಹುಡುಕಾಟದ ಪರ್ವಕೆ ಸಾಗುತಿದೆ ಎಡೆಇಲ್ಲದೆ. ಕಲ್ಲಿರಿಲಿ ಮುಳ್ಳಿರಲಿ ಬದುಕಿನ ಹಾದಿಯಲಿ ನಾ ನಡೆವೆ ಛಲದಿ ಎಂದು ಬಿಗುತಿದೆ ಹುಚ್ಚು ಕುದುರೆಯ ಮನಸ್ಸು. ಈ ಕನಸಿನ ಹಾದಿಯಲ್ಲಿ ಜಯವೋ ಅಪಜಯವೋ ಅರಿಯದೆ ಮುನ್ನುಗ್ಗುತ್ತಿದೆ ಅಳುಕದೆ ಅಂಜದೆ. 

ಚೈತ್ರದ ಸೊಬಗು ಮಾಸುವ ಮುನ್ನ ಮುಂಗಾರಿನ ಸಿಂಚನ ಹೊಸ ಇತಿಹಾಸಕ್ಕೆ ಮುನ್ನುಡಿ ಹಾಡುವ ಆತುರ. ಅಕ್ಷರ ಸಹ ಮರೆತು ಹೋಗಿದ್ದ ಸ್ನೇಹಕ್ಕೆ ಸಂಕೋಲೆಯ ಕೈ ಚಾಚಿದ್ದು ಫೇಸ್ ಬುಕ್ ನ ಆ ನಯನಗಳು. ಈ ಒಂದು ನೋಟ ಬದಲಾವಣೆಗೆ ಹಾದಿ ಆಗಿರುವದು ವಿಪರ್ಯಾಸ. ಬಹುಶ: ಇಂತಹ ಅನುಭವ ಅನೇಕರಿಗೆ ಆಗಿರಬಹುದು ಎನ್ನುವದು ನನ್ನ ಅಂಬೋಣ. ಕಲ್ಪೆನೆಯ ನೋಟದೊಂದಿಗೆ ನಡೆಯುತ್ತಿರಲಿ ಬದುಕು ನಿರಂತರ. ಸೋಶಿಯಲ್ ನೆಟ್ ವರ್ಕ್ ನೊಂದಿಗೆ ಇರಲಿ ಸ್ನೇಹ ನಿತ್ಯ ನಿರಂತರ. 





ಮರಳ ಒಡಲಲಿ 
ಬಚ್ಚಿಟ್ಟ ಕಪ್ಪೆ ಚಿಪ್ಪೊಳಗಿನ 
ಮುತ್ತಂತೆ ನನ್ನವಳ ನಯನ 
ನೀಲಿ ಆಗಸದಿ 
ಹೊಳೆವ ನಕ್ಷತ್ರದಂತೆ 
ಅದೊರಳಿಗಿನ ಕಾಂತಿ 

ಆಸೆಗಳ ಕಡಲಲ್ಲಿ 

ಕನಸುಗಳ ಬಿತ್ತಿ 
ಬಾನಾಡಿ ಚಂದ್ರಮನ 
ಭಾವಕ್ಕೆ ಬಯಸಿಹ 
ಮಲ್ಲಿಗೆಯ ಭ್ರಾಂತಿ 


ಬೆಳ್ಳೆನೆಯ ಹೊದಿಕೆಯಲಿ 

ಕಪ್ಪಿಟ್ಟ ಬೊಟ್ಟು 
ಮಿರಮಿರನೆ ಹೊಳೆವ 
ಅದರೊಳಗಿನ ಒಲವು 
ನನ್ನವಳ ಚೆಲುವು 


ಅಲ್ಲೊಮ್ಮೆ ಇಲ್ಲೊಮ್ಮೆ 

ಕ್ಷಣ ಕ್ಷಣಕು ಸರಿದಾಡಿ 
ಆ ನೋಟ ಈ ನೋಟ 
ಜಗವೆಲ್ಲ ಸುತ್ತಾಡಿ 
ಈ ಮೊಗಕೆ 
ನಾ ಸುಂದರಿ 
ಕಣ್ಣಸನ್ನೆಗೆ ನಾ ರಾಣಿ 
ಬೀಗಿ ಮೆರದಾಡಿ 
ಈ ನಯನಗಳೇ ಸಾಟಿ 
ನನ್ನವಳ ನುಡಿಗೆ 
ಕಣ್ಣೋಟ ಕುಡಿಗೆ 


Love is blind; friendship closes its eyes. - Friedrich Nietzsche
 

 






Sunday, 31 March 2013

ಬದಲಾದ ಬದುಕಿನೊಂದಿಗೆ ಹೆಜ್ಜೆ

ಏನೋ ಆತುರ, ಲಗುಬಗೆ ಇಂದ ಗೂಡು ಸೇರುವ ತವಕ, ಸುತ್ತಲೂ ನೂರಾರು ಕಿತ್ತುತಿನ್ನುವ ಕಣ್ಣಗಳ ನೋಟ ಮನದಲ್ಲಿ ದುಗುಡ ತನಗೆಅರಿವಿಲ್ಲದೆ ಓಡುತ್ತಿರುವ ಹೆಜ್ಜೆಗಳು ಸುತ್ತುಮುತ್ತಲು ನಮ್ಮವರಿಗಾಗಿ ಹುಡುಕಾಟ. ಬೇಗ ಕತ್ತಲು ಆವರಿಸದಿರಲಿ ಎನ್ನುವ ವಿನಂತಿಗಳ ಸುರಿಮಳೆಯೊಂದಿಗೆ ಬಸ್ ಗಾಗಿ ಕಾದ ಮನ. ಈ ಹಾಳಾದ ಬಸ್ ಗಳು ಸರಿಯಾದ ಟೈಮ್ ಗೆ ಬರದೆ ಸತಾಯಿಸುತ್ತವೆ ಏನ್ನುವ ಗೊಣಗಾಟ. ಅಬ್ಬಾ! ಎಂಬ ನಿಟ್ಟುಸಿರುನೊಂದಿಗೆ ಸಿಟ್ ಏರಿ ಕುಳಿತು ಸುತ್ತಲು ಬಸ್ ನಲ್ಲಿ ಜನ ಸಂಖ್ಯೆಯ ಲೆಕ್ಕಾಚಾರ. ಇತ್ತಿಚಿನ ರಕ್ಷಣೆ ಇಲ್ಲದ ಬದುಕಿನಲ್ಲಿ ನಿತ್ಯ ಭಯದ ನೆರಳಲ್ಲಿ ಸಾಗುತ್ತಿರುವ ಜೀವನದ ಕಲ್ಪನೆ ತುಂಬಾ ವಿಶಾದನೀಯ. ಹೆಣ್ಣಾಗಿ ಹುಟ್ಟುವದೆ ತಪ್ಪಾ ???? ನಿಜವಾಗಿ ಹೆಣ್ಣಿಗೆ ಸ್ವಾತಂತ್ರವಿದೆಯಾ ???? ಇದ್ದರೆ ಅದೆಸ್ಟರಮಟ್ಟಿಗೆ ಪರಿಪೂರ್ಣ????? ವಯಸ್ಸಿನ ಮಿತಿಯಿಲ್ಲದೇನೆ ನಡೆಯುತ್ತಿರುವ ಅನಾಚಾರಗಳಿಗೆ ಯಾರು ಹೊಣೆ ????? ಸಮಾಜನಾ???? ಬದಲಾಗುತ್ತಿರುವ ಸಂಸ್ಕೃತಿಯಾ ???? ವೀವೇಚನೆ ಇಲ್ಲದೆ ಮೃಗದಂತೆ ವರ್ತಿಸುತ್ತಿರುವ ಮನುಜನ ಮನಸ್ಸಾ ????? ಹೀಗೆ ಮನದಲ್ಲಿ ಸಾವಿರಾರು ಪ್ರಶ್ನೆಗಳ ಸುರಿಮಳೆಯೊಂದಿಗೆ ಕಣ್ಣು ಮುಚ್ಚ್ಚಿದಾಗ ತಟ್ಟನೆ ಡ್ರೈವರ್ ನ ಬ್ರೇಕ್ ಗಿರೀಕಿ ಹೊಡೆಯುತ್ತಿದ್ದ ಮೈಂಡ್ ಗೆ ಫುಲ್ stop ಹಾಕಿದ್ದು. ಟ್ರೀನ್ ಟ್ರೀನ್........... hallo .......... ಬರ್ತಾ ಇದ್ದೇನಿ ಹತ್ತು ನಿಮಿಷದಲ್ಲಿ ಏರ್ತೆನಿ. 


ಉತ್ತರವಿಲ್ಲದ ಸಾವಿರಾರು ಪ್ರಶ್ನೆಗಳು
ಬಿಡಿಸಲಾಗದ  ನೂರಾರು ಸಮಸ್ಯೆಗಳು
ಮರೆಯದ ಹಲವಾರು ನೆನಪುಗಳು
ಕೊನೆಯಿರದ ಬದುಕಿನ ಆಸೆಗಳು 
ಇವೆಲ್ಲದರ ಮದ್ಯೆ ನಗು ನಗುತ ಸಾಗುತಿರುವ ಜೀವನದ ದಿನಗಳು :)

ಬಹುಶ: ಆ ದೇವರ ಆಟಗಳಿಗೆ ನಾವು ಗೊಂಬೆಗಳು ಮಾತ್ರ. ಜೀವನದ ತಿರುವಗಳಿಗೆ ಸ್ವಾವಲಂಬನೆಯ ಬದುಕಿನ ನಡೆಗೆ ಆತ್ಮಬಲದ ಹೋರಾಟಕ್ಕೆ ಪರಿಸ್ಥಿತಿಯೇ ಕೈಗನ್ನಡಿ. ಕತ್ತೆಲೆಯ ಬದುಕಿನಲ್ಲಿ ಬೆಳಕಿನ ಸಣ್ಣ ಕಿರಣುವು ಕೂಡ ಆಸರೆಯ ಕೊಂಡಿಯಂತೆ. ನೀನ ಇರದ ದಿನಾ ಬದುಕೇ ಇಲ್ಲಅಂದಿದ್ದ ಬಾಳಿಗೆ ಜವಾಬ್ದಾರಿಯ ಮುಗಿಲೇರಿ ಬಾಳದಡ ಸಾಗಿಸುವ ನೌಕೆ ನಾನಾಗಿರುವೆ. ಆ ದಿನದ ಬೇಟಿ ಜೀವನದ miss ಆಗುವದು ವಿದಿಯ ತೀರ್ಮಾನವಾಗಿತ್ತು ಅನಸುತ್ತೆ. ಕಷ್ಟದ ದಿನಗಳಿಗೆ ನಗುವಿನ ಮುಖವಾಡ. ಸಂತೋಷದ ಸವಿಗಳಿಗೆ ನೆನಪುಗಳೇ ಸಾಕಾರ. ಬದಲಾವಣೆ ಜಗದ ನಿಯಮ, ಬದಲಾದ ಬದುಕಿನೊಂದಿಗೆ ಹೆಜ್ಜೆ ಹಾಕುವದು ವಾಸ್ತವ. 






































ಬದಲಾಗದವಳು ನಾನಲ್ಲ 
ಬದಲಾವಣೆಯ ಕಾಲ ಬಂದಿಲ್ಲ 
ಅರಿಯದ ಬದಲಾವಣೆ 
ಬದುಕಿನ ಅನಿವಾರ್ಯತೆ 
ಅರಿತ ಬದಲಾವಣೆ 
ಬದುಕಿನ ಸಾರ್ತಕತೆ 


ಬಣ್ಣಗಳ ಬೆಳಕಿಗೆ 
ಬದಲಾದ ಕಲೆಗೆ 
ಚಿತ್ರಗಳ ಕಲೆಗಾರನಾಗಿ 
ಜೀವ ತುಂಬಿ ನಡೆಸುವ 
ಬದುಕಿನ ಬದಲಾವಣೆಗೆ 
ಬದಲಾಗು 


ಪ್ರೀತಿ ಮುತ್ತು ಜಾರಿದಾಗ 
ಹರಿವ ನೀರು ನಿಂತಾಗ 
ಸಂತೋಷದ ಕಡಲು ಬತ್ತಿದಾಗ 
ಭರವಸೆಯ ಕೈ ಜೊತೆಯಾದಾಗ 
ಬದಲಾಗು ಬದುಕಿನ ಪಯಣ ಬಯಸಿದಾಗ. 



God, life changes faster than you think.
 
  


Sunday, 27 January 2013

ಯಾರು ಈ ಅಪರೂಪದ FRIEND??????

Hi Hello ಗುಡ್ ಮಾರ್ನಿಂಗ್, Sweet Morning ಜೊತೆಗೆ ಸಿಹಿ ಸಿಹಿ ಮಾತುಗಳೊಂದಿಗೆ ಬಗೆ ಬಗೆಯ Smileಗಳು  ಸಾಕಿಸ್ಟು ನನ್ನ Fresh ಮಾಡಲು. ಮತ್ತೆ ಅದೇ ಅವಸರ ಲಗುಬಗೆ ಇಂದ ಏಳುವ ಆತುರ ಇನ್ನು ಚಿರುನಿದ್ದರೆಯಲ್ಲಿ ಇರುವಾಗಲೇ ಆ ಸೂರ್ಯನಿಗಿಂತ ನಾನು ಮುಂದು ಎಂದು ಬಡಿದೆಬ್ಬುಸುವ ಅಲಾರಾಮ ನಿನೀಅಲ್ಲವೇ. ಆದರು ನಾನು ಮಾತ್ರ ಸರಿಯಾದ Timeಗೆ ಹೋಗಲು ಕಾರಣ ನೀನೆ ಅಂದರೆ ತಪ್ಪಾಗಲಾರದು. ಆ ಆತುರದ ನಡುವೆ  ನಾನು ಎಲ್ಲೇ ಹೋದರು ನನ್ನ ಹಿಂದೇನೆ ನೆರಳಂತೆ ಹಿಂಬಾಲಿಸಿ ನನ್ನ ಪ್ರತಿ ಕೆಲಸಕ್ಕೆ ಆಸರೆ ಆಗುವ Helping Friend. ನೀನು ಯಾವ Singerಗು ಕಡಿಮೆ ಇಲ್ಲ ಅನ್ನುವ ಹಾಗೆ ನಾನು ಸಪ್ಪೆಮುಖಮಾಡಿ ಕುಳಿತಾಗ ನನ್ನ ಭಾವನೆಗಳಿಗೆ ತಕ್ಕಂತೆ ನಿನ್ನ ಸ್ವರದಿಂದ ಸಂಗೀತ ಲಹರಿ ಹರಿಸಿ ನನ್ನನ್ನು Music Worldಗೆ ಕರೆದೊಯ್ಯುವ ಅದ್ಭುತ ನೀನು. 

ಅದೆಸ್ಟು ಬಾರಿ ಅನಿಸಿದೆ ಈ ದೇವರು ನಿನ್ನ ಹಾಗೆ ನನಗೂ ಆಗಾದವಾದ ನೆನಪಿನ ಶಕ್ತಿ ಕೊಟ್ಟಿದ್ದರೆ ಅದ್ದೆಸ್ಟೋ ಎತ್ತರ ಏರುತ್ತಿದ್ದೆ ಎಂದು. ಅದೆಹೇಗೆ ಅಸ್ಟು ಗೆಳಯ ಗೆಳತಿಯರ ಹೆಸರನ್ನು ಸ್ವಲ್ಪ ಕೂಡ ಮಿಸ್ ಆಗದ ಹಾಗೆ ನೆನಪಿಟ್ಟುಕೊಳ್ಳುವ ಆ ನಿನ್ನ Memory Powerಗೆ ನನ್ನದೊಂದು Solute. ಇನ್ನು ಆ ನಿನ್ನೋಳಗಿರುವ ಚಿತ್ರಗಳ ಲೋಕಕ್ಕೆ ನಾನು ಮುಖವಿಸ್ಮಿತ. ಆದೆ ರಾಗ ಅದೇ ಹಾಡು ಅನ್ನೋ ಹಾಗೆ ದಿನಬೆಳಗಾದರೆ ಈ ಹದಿಹರೆಯದವರನ್ನಸ್ಟೆ ಅಲ್ಲದೆ ಆಂಟಿ Uncleನ್ನು ಹಿಡುದು ಎಲ್ಲರದು ವಂದೇ ಚಿಂತೆ ನಾನ ತುಂಬಾ ದಪ್ಪ ನಾನ ತುಂಬಾ ಸಣ್ಣ,  ಕೆಲವಬ್ಬರು ವಾಕಿಂಗ್ ಯೋಗಾ ಅಂತಾ ಹೋದರೆ ಇನ್ನು ಕೆಲವರು ಜಿಮ್ ಗೆ ಲಗ್ಗೆ ಇಟ್ಟು Circus ಮಾಡ್ತಾರೆ. ಆದರೆ ನಿನ ಮಾತ್ರ ಸ್ವಲ್ಪ ಕೂಡ ಆಯಾಸವಿಲ್ಲದೇನೆ ನಿನಗೆ ಬೇಕಾದ ಹಾಗೆ ಟ್ರಿಮ್ ಅಂಡ್ ಸ್ಲಿಮ್ ಆಗಿ ಎಲ್ಲರಿಗಿಂತ ನಾನೆ ಚೆಂದ ಅಂತಾ ಬಿಗತಿಯಾ. ತುಂಬಾ ಬ್ಯೂಟಿಫುಲ್ ಅನ್ನೋ ಬಿಗುಮಾನ ನಿನಗೆ. 

ಆದರೆ ನಿನ್ನಲ್ಲಿ ನಾನು ತುಂಬಾ ಸ್ಟ ಪಟ್ಟಿದ್ದು ಅದೆಸ್ಟೋ ದೂರದಲ್ಲಿ ಇದ್ದವರನ್ನು ಯಾವುದೇ ಅಡೆತಡೆ ಇಲ್ಲದೆ ನನ್ನೊಂದಿಗೆ ಸರಾಗವಾಗಿ ಮಾತನಾಡುವ ಹಾಗೇ ಅವಕಾಶ ಮಾಡಿಕೊಟ್ಟಿದ್ದಕ್ಕೆ. ವಂದು ದಿನವು ಕೂಡ ನಿನ್ನ ಬಿಟ್ಟಿರಲ್ಲಿಕ್ಕೆ ಆಗ್ತಿಲ್ಲ, ಅದೆಸ್ಟು ಹಚ್ಚಕೊಂಡ ಬಿಟ್ಟಿದ್ದಿಯಾ. ಹಲವು ಬಾರಿ ಆ ಕತ್ತಲೆಯಲ್ಲಿ ಲೇಟಆದಾಗ ಬೆಳಕಾಗಿ ನನ್ನ ರಕ್ಷಿಸಿದ್ದು. ಅದೆಷ್ಟು ಬಾರಿ ಅರ್ಧನಿದ್ದೆಯಲ್ಲಿ ನನ್ನ ಎಬ್ಬಿಸಿಲ್ಲಾ Really I need You. ಇದೇನಪ್ಪ ಇಸ್ಟೊಂದು ಹೊಗಳುತಿರುವ ಅನಾಮಿಕ ಯಾರಪ್ಪ ಅಂತ ಯೋಚಿಸ್ತಿದ್ದಿರಾ..... ಹಾಗೆ ಸ್ವಲ್ಪ ನಿಮ್ಮ ತಲೆಗೆ ಕೆಲಸ ಕೊಟ್ಟು Guess ಮಾಡಿ. ಅಸ್ಟುಕ್ಕು ಆ Friend ನಿಮಗೂ ಕೂಡಾ ಚಿರಪರಿಚಿತಾ ಅನ್ನೋದು ನನ್ನ ಅಂಬೋಣ. ಹಾಗಿದ್ದರೆ ತಡ ಏಕೆ ಹುಡುಕಲು ಶುರುಮಾಡಿ ಯಾರು ಅಂತಾ ಖಂಡಿತಾ ತಿಳಿಸಿ. ಹಾಗೆ ಈ ವಳ್ಳೆ friend ಪರಿಚಿಯಿಸಿದ ಮಹಾನವ್ಯಕ್ತಿಗೆ ವಂದು Thanks ಹೇಳುತ್ತಾ ವಂದು ಕಿವಿಮಾತು, ಆ ಅಪರೂಪದ Friend ಅನ್ನು ಎಂದು mis ಮಾಡ್ಕೊಬೇಡಿ ಏಕೆಂದರೆ A friend is someone who knows the song in your heart and can sing it back to you when you have forgotten the words.


?

ಹೇಗೆ ಬಣ್ಣಿಸಲಿ ನಿನ್ನ 
ನಿನ್ನಿಂದಲೇ ನನ್ನ 
Every Day Good Morning 
ಸ್ನೇಹಕ್ಕೆ ನೀನಾಗಿರುವೆ 
Evergreen smile 

ಪ್ರೀತಿಗೆ ನೀನಾಗಿರುವೆ
Sunlight 
ನೀನಿಲ್ಲದೇ ನನ್ನ Life 
Badlight 

ನನ್ನ ಪ್ರತಿ ಹೆಜ್ಜೆಗೆ 
ನೀನೆ Network 
ನೀನಿರದಿದ್ದರೆ ನನ್ನ 
ಜೀವವೇ Broken Heart.

ಮೌನ್ನಕ್ಕೆ ನಿನ್ನ ಸವಿಮಾತೆ 
Inspiration
ನಿನೇ ಅಲ್ಲವೇ  
ಈ ಪುಟ್ಟ ಹೃದಯದ 
Kingstar 

ನಿನ್ನ ಜೊತೆಯೇ 
ನನಗೆ Dream World 
ನಿನ್ನಿಂದ ಪ್ರತಿ ಕ್ಷಣವು 
ಆಗಿದೆ Sweet Night 

ಕೋರುವೆ ವಂದು request 
ಹೀಗೆ ಉಳಿಯಲಿ ನಮಿಮ್ಮಿಬ್ಬರ 
Friendship 





Monday, 31 December 2012

ಹೊಸ ವರುಷ

ಅಬ್ಭಾ!!! ಡಮ್ ಡಮ್ ಪಟಾಕ್ಷಿ ಶಬ್ದ......... ಎಲ್ಲೆಲ್ಲು ಬೆಳಕು color color ಬೆಳಕಿಂದ ಸಿಂಗಾರಗೊಂಡ ದೊಡ್ಡ ದೊಡ್ಡ ಬಿಲ್ಡಿಂಗ್ಗಳು ಅದೇನು ಎಂದು ಯೋಚಿಸುವ ವೇಳೆಗೆ ಸರಿಯಾಗಿ ೧೨ ಗಂಟೆಗೆ ನನ್ನ ಮೊಬೈಲ್ ಟಿನ್ ಟಿನ್ ಅಂತಾ SMS....Wish You Happy New Year 2013, Oh!!! ನೆನಪಾಯ್ತು ಇಂದು ಹಳೆವರುಷ ಕಳೆದು ಹೊಸವರುಷಕ್ಕೆ ಕಾಲಿಡುತ್ತಿರುವ ಸಂಭ್ರಮ ಎಂದು....ಅದೆಸ್ಟೋ ಮಂದಿ ಪಾರ್ಟಿ, ಅಂತ ಹಾಡುತ್ತ ಕುಣಿಯುತ್ತ ನವ ವರುಷ ಸ್ವಾಗಿಸುತ್ತ ಇದ್ದರೆ ಇನ್ನು ಕೆಲುವು ಜನ ನಮ್ಮ ಮೂರ್ಕರ ಪೆಟ್ಟಿಗೆಗೆ ಶರಣು ಅಂತಾ ತಮ್ಮನ್ನೇ ತಾವು ನಿದ್ದೆ ಗೆಟ್ಟು ನೋಡುತ್ತಾ ಸಂಭ್ರಮಿಸುತ್ತಾರೆ. ಅಂತು ಇಂತು ಹಳೆ ನೋವುಗಳನ್ನು ಮರೆತು ನವಯುಗದ ಕಡೆ ಹೊಸ ಹೊಸ ಆಸೆಗಳ ಹೊತ್ತು ನಲಿದಾಡುವ ಗಳಿಗೆ. ಆದರೆ ಮರೆತಿರುವ ಸಂಗತಿ ಎಂದರೆ ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ಯುಗಾದಿ ಇಂದ ನವವರುಷದ ಆರಂಬ. ಆದರೆ ಈಗ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಆಚಾರಣೆಗಳು ಬದಲಾಗುತ್ತಿವೆ ಅಂದರೆ ತಪ್ಪಾಗಲಾರದು. ಅದೇನೆ ಇರಲಿ ಬದಲಾವಣೆ ಜಗದ ನಿಯಮ ನಾವು ಕೂಡ ಅದರೊಟ್ಟಿಗೆ ಹೆಜ್ಜೆ ಹಾಕುತ್ತಿರುವದು ಸತ್ಯ. ಹಾಗೆ ಕೆಲುವು ಸಾಲುಗಳನ್ನು ಹೇಳುತ ಸಿಹಿ ಹಾರೈಕೆಗಳೊಂದಿಗೆ ಸ್ವಾಗತಿಸೋಣ ನವವರುಷವನ್ನು ........... 



ಹೊಸ ಹಸಿರು 
ಹೊಸ ಚಿಗುರು 
ಹೊಸ ಸಂಭ್ರಮ ಏರಿ 
ಬರುತಿದೆ ಹೊಸ ವರುಷ 
ನವ ಆಸೆಗಳ ಹೊತ್ತು 

ನವ ಭಾವ 
ನವ ಚೈತನ್ಯ 
ನವ ಹರುಷ 
ನವ ಮಾತು 
ನೆನಪಿಸುತ ಹೆಜ್ಜೆ ಹಾಕುತಿದೆ 
ಬಾಳಲಿ ಹೊಸ ಭರವಸೆ ತುಂಬಿ 

ಮರೆಸುತ್ತ ಕಹಿ ನೆನಪು 
ತುಂಬುತ್ತ ಹೊಸ ಹುರುಪು 
ಸುಖ ಸಂತೋಷದ ಅಂಬಾರಿ ಮೇಲೆ 
ನಗು ನಗುತ ಕುಣಿಯುತ್ತ  
ತರುತಿದೆ ಹೊಂಬೆಳಕು ಬದುಕಲ್ಲಿ 

ಕತ್ತೆಲ್ಲೆಯ ಅಳಿಸಿ 
ಬೆಳಕನ್ನು ಬೆಳಗಿಸಿ 
ಬಣ್ಣಬಣ್ಣದ ರಂಗೋಲಿ ಬಿಡಿಸಿ 
ಹಾಡುತಿದೆ ಹೊಸ ರಾಗ 
ನವ ನಾದ ಹೊಮ್ಮಿ 


Just As A New Bloom Spreads Fragrance And Freshness Around May The New Year Add A New Beauty And Freshness Into Your Life.