ಎತ್ತ ನೋಡಿದರು ಹಸಿರು ನೀನ ಚೆಂದ ನಾನ ಚೆಂದ ಎಂದು ಬಿಗುತಿರುವ ಹೂವಗಳ ಸಾಲು ........ ನಾನೇನು ಕಡಿಮೆ ಎಂದು ಅತ್ತಿಂದ ಇತ್ತ ಇತ್ತಿಂದ ಅತ್ತ ಹೂವಿಂದ ಹೂವಿಗೆ ಬಿಗುಮಾನವಿಲ್ಲದೆ ಹಾರುವ ಪರಿ ಅದೆಷ್ಟು ಚೆಂದ ನೋಡಲು........ ಆ ಸೊಬಗಿಗೆ ಮನ ಸೋಲದವರಿಲ್ಲ, ನೀ ಸಿಕ್ಕ ಕ್ಷಣ ಆನಂದಕ್ಕೆ ಕೊನೆ ಇಲ್ಲದೆ ಕುಣಿದಾಟ, ನಿನ್ನನ್ನು ಹಿಡದ ನಾನೆ great ಅನ್ನೋ ಹಾರಾಟ........ ಅಕ್ಕ ಪಕ್ಕದ ಸ್ನೇಹಿತರು, ಆಂಟಿ, uncle ಎಲ್ಲರಿಗು ನಿನ್ನ ಪರಿಚಯದ ಭಾಷಣ. ಆ ನಿನ್ನ colorful beauty ನನಗು ಇರಬಾರದಿತ್ತೆ ಅನ್ನುವ ಗೊಣಗಾಟ, ನಿನ್ನಂತೆ ನಾನು ಎಲ್ಲೆಂದರಲ್ಲಿ ಅಲ್ಲಿ ಸ್ವಚಂದವಾಗಿ ಹಾರಾಡುವ ಹಾಗೆ ಇರಬಾರದಿತ್ತೆ ಅನ್ನುವ ಬೇಜಾರು....... ನಿನ್ನನ್ನು ಬೆನ್ನಟ್ಟಿ ಓಡುವದರಲ್ಲಿ ಅದೇನೋ ಖುಷಿ. ಆದರೆ, ಇಂದು ಕೇವಲ computer, mobile, video game ಅನ್ನೋ ವಸ್ತುಗಳ ಮೇಲೆ ಇರುವ ವ್ಯಾಮೋಹ ಕೆಲವು ಬೆರಳಂಚಿನಲ್ಲಿ ನಿನ್ನೊಡನೆ ಆಡುವ ಸಂಗತಿ ಖೇದವೆನಿಸುತ್ತದೆ. ಹಾಗೆ ನಿನ್ನ ಸಂತತಿ ದಿನದಿಂದ ದಿನಕ್ಕೆ ಕ್ಷಿಣಿಸುತ್ತಿರುವದನ್ನು ಗಮನಿಸಿದರೆ ಮುಂದೊಂದು ದಿನ ಪುಸ್ತಕದ ಪರಿಚಯದ ಪುಟವಾಗುವದರಲ್ಲಿ ಸಂಶಯವಿಲ್ಲ. ನಿನ್ನ ನೆನಪಿಗಾಗಿ ಸಣ್ಣ ಪ್ರಯತ್ನದೊಂದಿಗೆ ಒಂದು ಹೆಜ್ಜೆ.
“My thoughts are like butterflies. They are beautiful, but they fly away.” :) :)
ಸದ್ದಿಲ್ಲದೇ ಗದ್ದಲವಿಲ್ಲದೆ
ಹೊರಟೆ ನೀನು ಎಲ್ಲಿಗೆ?
ಭುವಿಯಿಂದ ಬಾನಿಗೆ
ಭಾನಿಂದ ಮೆಲ್ಲಗೆ
ಹಂಗಿಲ್ಲದೆ ಸುಳಿವಿಲ್ಲದೆ
ಹುಡುಕುತಿರುವೆ ಯಾರಿಗೇ ???
ಸುತ್ತ ನೋಡೇ ಕಪ್ಪು ಬಿಳಪು
ಮದ್ಯೆ ಚುಕ್ಕಿ ಪಚ್ಚೆ ಬೆಳಕು
ಹೆಜ್ಜೆ ಗೆಜ್ಜೆ ಅಚ್ಚಿಲ್ಲದೆ
ಹಾರುತಿರುವೆ ಎಲ್ಲಿಗೆ ?
ಮೈಯ್ಯ ತುಂಬಾ ಕಣ್ಣು ಬಣ್ಣ
ಸೃಷ್ಟಿಗೊಂದು ಬೊಟ್ಟಿನಂತೆ
ಜಗವ ಮರೆಸಿ ದೂರ ಅರಸಿ
ಬೀಗಿ ಸಾಗಿ ಹೊರಟ ಚೆಲುವು
ಕೇಳೋ ಆಸೆ ಎದೆಯ ಒಳಗೆ
ಪಯಣ ಎಲ್ಲಿಗೆ ?
ಸೃಷ್ಟಿಗೊಂದು ಬೊಟ್ಟಿನಂತೆ
ಜಗವ ಮರೆಸಿ ದೂರ ಅರಸಿ
ಬೀಗಿ ಸಾಗಿ ಹೊರಟ ಚೆಲುವು
ಕೇಳೋ ಆಸೆ ಎದೆಯ ಒಳಗೆ
ಪಯಣ ಎಲ್ಲಿಗೆ ?
“My thoughts are like butterflies. They are beautiful, but they fly away.” :) :)

No comments:
Post a Comment