ಮನವೇಕೊ ಬರಿದಾದಂತೆ ಸುತ್ತಲು ಕತ್ತಲು ಆವರಿಸಿ ನೂರಾರು ಸುಳಿಗಳ ನಡುವೆ ಗಿರಿಕಿ ಹೊಡೆಯುತಿರುವ ಭಾವವೇ ಮನಸೆಂಬ ಮಾಯೆ ......... ನಿಜವೇ ???? ಮನಸೇ ಹಾಗಲ್ಲವೇ ಬೇಕಿದ್ದು ಬೇಡವಾಗಿದ್ದು, ಅಳು, ನಗು ಎಲ್ಲವನ್ನು ತನ್ನದೇ ಆಸ್ತಿ ಅನ್ನುವ ಬಿಗುಮಾನ.
ಮಾಯೆಯಲ್ಲದ ಮನಸು
ಮಾಯೆಗಾಗಿ ಮಾಯೆಗೊಸ್ಕರ
ಮಾಯವಾದ ಮನಸು
ಮಾಯೆಯೊಳಗೆ ಮನೆಮಾಡಿ
ಮಾಯೆಯಂತೆ ಮಾತಾಡಿ
ಮರುಳ ಮಲ್ಲಿಗೆಯಾಯ್ತು ಮಾಯೆ
ಇರಬಹುದು ಈ ಮನಸೆಂಬ ಮಾಯೆ ಬಲು ವಿಚಿತ್ರ ಎಲ್ಲವು ನಂನ್ನತೆ ಅಗಬೇಕುನ್ನವ ಆಗಾದವಾದ ನಂಬಿಕೆ, ಆಸೆಗಳ ಮಹಾಪೂರವನ್ನೇ ಕಟ್ಟುತ್ತೆ ಅದು ಈಡೇರದೆ ಇರುವಾಗ ಜಗತ್ತೇ ತನ್ನ ಮೇಲೆ ಬಿದ್ದ ಹಾಗೆ ದುಖಿಸುತ್ತೆ ಕಾರಣವಿಲ್ಲದೆ ಕೊಪಿಸಿಕೊಳ್ಳುತ್ತೆ ಬೇಡವಾದದನ್ನು ಯೋಚಿಸುತ್ತೆ, ಕೈಗೆಟುಗದ ಕನಸುಗಳ ಮನೆ ಮಾಡಿ ನಿರಾಸೆಯ ಅಲೆಯಲ್ಲಿ ಕೊಚ್ಚಿಹೊಗುತ್ತೆ, ತನಗೆ ಇಷ್ಟವಾಗಿದನ್ನು ಪ್ರೀತಿಸುತ್ತೆ ಬೇಡವಾಗದನ್ನು ದ್ವೇಷಿಸುತ್ತೆ ಏಕೆ ಹೀಗೆ ????
ಈ ಮಾಯೆ ವ್ಯೂಹವೆ ಹಾಗೆ ಅನಸುತ್ತೆ ಸದಾ ಲೆಕ್ಕಾಚಾರಗಳ ಸುಳಿಯಲ್ಲಿ ಮುಳಿಗಿರೋದು, ನೂರಾರು ಸಂಭಂದಗಳ ಅಳಿವು ಉಳಿವುಗಳ ಲೆಕ್ಕಾಚಾರ, ಕುರುಡು ಪ್ರೀತಿಯ ಅನ್ವೇಷಣೆಯ ಲೆಕ್ಕಾಚಾರ, ಬೆಟ್ಟದಂತ ಗೌರವ ಪ್ರತಿಷ್ಟೆಗಳನ್ನೂ ಕಾಪಾಡಿಕೊಳ್ಳುವ, ಗುರಿ ಛಲಗಳ ಬೆನ್ನಟ್ಟುವ ಲೆಕ್ಕಾಚಾರ, ನಮ್ಮವರು ಮರೆತರು ನಾನು, ನನ್ನದು ಎನ್ನುವ ಬಾಂದ್ಯವ ಬೆಳೆಸುವ ಲೆಕ್ಕಾಚಾರ, ಕಷ್ಟವಾದರೂ ಗಟ್ಟಿಯಾದ ಗುಟ್ಟು ರಟ್ಟಾಗಿ ಹಕ್ಕಿ ಪಿಕ್ಕಿಗಳಿಗೆ ಆಹಾರವಾದರೂ ನಗುವಿನ ಮುಖವಾಡ ಹಾಕುವ ಲೆಕ್ಕಾಚಾರ, ಬದುಕಿನ ನಡೆಯಲ್ಲಿ ಬರುವ ಹಲವಾರು ಮುಳ್ಳುಗಳನ್ನ ದಾಟಿ, ಅನಿವಾರ್ಯವಾದರೂ ಅನುಕೂಲತೆಗಳ ಬೀಗ ತೆಗೆದು, ಮನಸಿಗ್ಗೆ ಬೇಕೋ ಬೇಡವೋ ಅಂತೆ ಕಂತೆಗಳ ಜಾತ್ರಿಯಲ್ಲಿ ಜಿಗಿದಾಡಿ ಬದುಕನ್ನು ರೂಪಿಸಿಕೊಳ್ಳುವ ಲೆಕ್ಕಾಚಾರ. ಎಲ್ಲರು ಹೇಳುವ ಹಾಗೇ.
ಮನಸೊಂದು ಬಣ್ಣದ ಮೂಟೆ
ಅದರ ಮುಖಗಳು ಹಲವಾರು
ನೋಡುವ ಕಣ್ಣಗಳು ನೂರಾರು
ಬಯಸುವ ಬಯಕೆಗಳು ಹತ್ತಾರು
ಮನದೊಳಗಿರುವ ಮಾತುಗಳು ಸಾವಿರಾರು
ಹೃದಯಕ್ಕೆ ನಿಲುಕುವವು ಹದಿನಾರು
ಈ ಮನಸಿನ ಆಳಕ್ಕೆ ಇಳಿದಷ್ಟು ಗೊಂದಲಗಳ ಗೂಡು ಸೃಸ್ಟಿಯಾಗುತ್ತೆ. ಯಾವುದನ್ನೂ ಅಸ್ಟು ಸಲೀಸಾಗಿ ಒಪ್ಪಿಕೊಳ್ಳದು ಮನಸು ಹಾಗೇ ಯಾವದನ್ನು ಅಸ್ಟು easy ಆಗಿ ಬಿಟ್ಟುಕೊಡಲು ಒಪ್ಪದು. ಹಲವು ಬಾರಿ ಅನಸುತ್ತೆ ಆ ದೇವರು ಅದೆಸ್ಟೋ ಒಳ್ಳೆ ಮನಸುಗಳ್ಳನ್ನು ಸೃಷ್ಟಿಸಿದ ಹಾಗೇ ಕೆಲವು ಕ್ರೂರ ಮನಗಳ ಯಾಕೆ ಪರಿಚಿಯಿಸಿದ ???? ಬಹುಶ: ಇಂತಹ ಕ್ರೂರ ಮನಗಳಿಂದಾನೆ ಜಗತ್ತಿನಲ್ಲಿ ಮನುಷತ್ವವನ್ನು ಮರೆತು ನಡೆವ ನಡೆಗಳು, ಯುದ್ದಗಳು, ಅನಾಚಾರಗಳಂತ ರುದ್ರ ತಾಂಡವ ಹೆಚ್ಚಾಗಿರೋದು ಅನ್ನೋದು ನನ್ನ ಅಂಬೋಣ. ಇಂದು ಅದೆಸ್ಟೋ ಮುಗ್ದ ಮನಸ್ಸುಗಳು ಅರಳುವ ಮುನ್ನವೇ ಬಾಡಿಹೋಗುವ ವಿಚಾರ ನೋಡಿದರೆ ಆತ್ಮ ವಿಶ್ವಾಸದ ಮನಗಳ ಸಂಖ್ಯೆ ದಿನದಿಂದ ದಿನಕ್ಕೆ ಕುಗ್ಗುತ್ತಿದೆ ಅನಸುತ್ತೆ. ಅದೇನೇ ಇರಲಿ ಜೀವನದ ಪಯಣದಲ್ಲಿ ತಿರುವುಗಳ ಜೊತೆ ಹೆಜ್ಜೆ ಹಾಕಿದರೆ ಭರವಸೆಗಳ ಬದುಕಿನ ಬಾಗಿಲು ಯಾವಾಗಲು ತೆಗದೆ ಇರುತ್ತೆ . ಕತ್ತಲು ಕಳೆದ ಮೇಲೆ ಬೆಳಕು ಮೂಡಲೇ ಬೇಕಲ್ಲವೆ !!!!!!!!!!!!!!!!

No comments:
Post a Comment