Tuesday, 23 February 2016

ಕನಸು ಕಲ್ಪನೆಗಳ ನಡುವೆ ಭಾವನೆಗಳ ಬಿಂಬ

ಅದೊಂದು ಸುಂದರವಾದ ಭವ್ಯ ವೇದಿಕೆ ಸುತ್ತಲು ಬಣ್ಣ ಬಣ್ಣ ಹೂವಗಳ ಅಲಂಕಾರ ... ಸುಸ್ವಾಗತ ಎಂದು ಕೈ ಬೀಸಿ ಕರೆಯುತಿರುವ ನಾಮ ಪಲಕಗಳು... ಎಲ್ಲೇ ನೋಡಿದರು ಹಬ್ಬದ ವಾತಾವರಣ, ಚೆಂದ ಚೆಂದದ ಉಡಿಗೆ ತೊಟ್ಟು ಆತುರ ಕಾತುರ ಕುತೂಹಲದಿಂದ ಸದನದ ತುಂಬೆಲ್ಲ ಕುಳಿತಿರುವ ಜನಗಳು ...ಹೀಗೆ ನೋಡ ನೋಡತಿದ್ದಂತೆ ವೇದಿಕೆಯ ಮೇಲೆ ಆಸಿನರಾದ ಎಲ್ಲ ಮಹನೀಯರ ಪರಿಚಯದ ಬಗ್ಗೆ ವಿವರಿಸಿದ ನಿರೂಪಕಿ ... ಕೆಲವರು ಭಾಷಣಗಳ ಮೂಲಕ ಮಾತನಾಡಿದರೆ, ಇನ್ನ ಕೆಲವರು ತಮ್ಮ ಹಾಸ್ಯದ ಮೂಲಕ ನೆರದ ಜನರನ್ನು ರಂಜಿಸುವ ಪ್ರಯತ್ನ ಮಾಡಿದರು .....ಎಲ್ಲರ ಪರಿಚಯ  ಭಾಷಣಗಳ ಮದ್ಯೆ ತಟ್ಟೆಂದು ಒಂದು surprise ಹೆಸರು ವೇದಿಕೆಯ ಮೇಲೆ ಬರಬೇಕೆಂದು....  ಈ ಪ್ರಶಸ್ತಿಯನ್ನು ಸ್ವೀಕರಿಸಬೇಕು ಎಂದು ಕರೆದಾಗ ಆದ ಸಂತೋಷ ಹೇಳಲು ಆಸದ್ಯಾ .... ಇನ್ನೇನು ಆ ಪ್ರಶಸ್ತಿ ಕೈ ಸೇರಿತು ಅನ್ನೋವೆಳೆಗೆ ಟ್ರಿನ್ ಟ್ರಿನ್ ನ್ ನ್ ನ್ ಅಂತ ನನ್ನ ಅಲಾರಂ ಕೂಗಿತು ..... ಛೆ ಇನ್ನ ಸ್ವಲ್ಪ ಹೊತ್ತು ಬಿಟ್ಟು ಹೊಡೆದಿದ್ದರೆ ಪ್ರಸ್ತಸ್ತಿ ಅದ್ರು ಸಿಕ್ಕಿರೋದು ಅಂತ ಚಟಪಟಿಸುತ್ತ ಗೊಣಗುತ್ತ ಎದ್ದಿದ್ದು ಅದೆಸ್ಟೋ ಸಲ ನಮ್ಮ ಜೀವನದಲ್ಲಿ ಉಂಟು  .... 


ಕನಸಿಗೆ ಆತುರ 
ಕಲ್ಪನೆಗೆ ಕಾತುರ 
ಮನಸುಗಳಿಗೆ ಮಮಕಾರ 
ವಾಸ್ತವಕೆ ಜಯಕಾರ 


ಭಾವಗಳ ಬೆಳಕಿಗೆ 
ಕನಸುಗಳ  ಚಿತ್ರಪಟ 
ನೆನಪುಗಳ ಬಾವುಟಕೆ 
ಕಲ್ಪನೆಗಳ ಜಂಜಾಟ 
ಕನಸುಗಳ ನೆನಪುಗಳ ಮದ್ಯೆ 
ಮನಸುಗಳ ನೆಗಯಾಟ 


ಕನಸುಗಳಿಗೆ ಕತ್ತಲೆಯೇ  ರಾಜ 
ಕಲ್ಪನೆಗಳಿಗೆ ಬೆಳಕೇ ಮಹಾರಾಜ                                                                    
ನಿಜ ಬದುಕಿಗೆ ಅನುಭವಗಳೇ ಜಯರಾಜ    
                                                                                                                                                                                                                                       
ಈ ಕನಸುಗಳು ಕಲ್ಪನೆಗಳು ಎಸ್ಟೋ ಸಲ ಸಂತೋಷವನ್ನು ಕೊಡುತ್ತವೆ ಹಾಗೆ sometimes ವಾಸ್ತವ ಬದುಕಿಗೆ ಹತ್ತಿರವೆನುಸುತ್ತವೆ. ಕನಸುಗಳು ಭಾವನೆಗಳಿಗೆ ರೂಪ ಕೊಟ್ಟರೆ ಕಲ್ಪನೆಗಳು ಅನುಭವಗಳಿಗೆ ಪಾಟವನಿಸುತ್ತವೆ...... ಈ ರೀತಿ ಕನಸುಗಳ ಮಜಾ ನೀವು enjoy ಮಾಡಿರಿತಿರೀ ಅನ್ನೋದು ನನ್ನ ಅಂಬೋಣ ..... 


You have to dream before your dreams can come true.
A. P. J. Abdul Kalam

No comments:

Post a Comment