ಮೌನಕ್ಕೆ ನೂರು ಅರ್ಥ ತಾಳ್ಮೆಯ ಮತ್ತೊಂದು ರೂಪವೇ ಮೌನ ಗೆಲ್ಲಿಸುವ ಶಕ್ತಿಯು ಉಂಟು ಸೋಲಿಸುವ ದೈರ್ಯವೂ ಉಂಟು but ಇದು ಎಲರಲ್ಲೂ ಸಿಗುವದು ಅಪರೂಪ ಹೇಳಲಾಗದ ಮಾತುಗಳಿಗೆ ಮೌನವೇ ಉತ್ತರವಾಗುತ್ತೆ ಮನಸಿನ ಕನ್ನಡಿಯಂತೆ ವರ್ತಿಸುತ್ತೆ ಹಾಗೆ ಮತ್ತೊಬ್ಬರಿಗೆ weak ಅನ್ನೋ ಅರ್ಥವನ್ನು ಕೊಡುತ್ತೆ ಅದು ಅವರವರ ಅಭಿಪ್ರಾಯಕ್ಕೆ ಬಿಟ್ಟಿದ್ದು
ಎಲ್ಲಾ ಸಮಯದಲ್ಲೂ silent work ಆಗೋದಿಲ್ಲ ಅನ್ನೋದು ಅಷ್ಟೇ ನಿಜಾ ಸಮಯಕ್ಕೆ ತಕ್ಕ ಹಾಗೆ ಅದರ ಉಪಯೋಗ ಆದರೆ ಚೆನ್ನ ಮೌನದ ಭಾಷೆ ಅರ್ಥ ಆಗೋದು ಅಂತರಂಗಕ್ಕೆ ಜಗಕೆ ಸೋಲದಿರು ಆತ್ಮಸಾಕ್ಷಿಗೆ ಸೋಲು ಅದು ನಿನ್ನ ಗೆಲುವು ತಿಳಿಯುವ ಮನಸಿಗೆ ಯಾವ ಭಾಷೆಯಾದರೇನು ?
ನುಡಿದಿದೆ ಭಾವಗಳ ತರಂಗ
ನಲ್ಮೆಯಲಿ ಮೀಟಿದೆ ಅಂತರಂಗ
ಹೃದಯದಲಿ ನೂರು ಭಾವಾಂತರಂಗ
ಹೇಗೆ ಹೇಳಲಿ ಮನದ ಮೌನಾತರಂಗ
ಜಗದಿ ಕಾಣುತಿದೆ ಸಾವಿರ ಕನಸುಗಳ ತೋಟ
ಮನದಿ ಹೇಳಿದೆ ಒಂದು ನೆನಪಿನ ಆಟ
ಕಂಡು ಕಾಣದೆ ಮೂಕವಾಗಿದೆ
ಮೌನದ ಮಿಂಚಿನಾಟ
ಹೇಳದೆ ಕೇಳದೇ ಹಾರುತಿದೆ
ಕಣ್ಣಂಚಿನಲ್ಲಿ ಸೆಳೆಯುತ್ತಿದೆ
ಮಿಂಚಿ ಮರೆಯಾಗುತಿದೆ
ಕೇಳುವುದೇ ಹೇಗೆ
ತಿಳಿಯುವುದು ಹೇಗೆ
ಉತ್ತರವಿದೆಯೇ ಅಂತರಂಗದ ಭಾಷೆಗೆ ?
ಕೊನೆ ಇಲ್ಲದ ಮೌನರಾಗಕೆ
ಮೌನದ ಮಾತುಗಳಿಗೆ ಕಣ್ಣಿನ ಆಸರೆ ತಿಳಿಯುವ ಮನಗಳಿಗೆ ಬೆಳಕಿನಾಸೆರೆ

No comments:
Post a Comment