ತುಂಬಾ ದಿನಗಳ ನಂತರ ಬರವಣಿಗೆಗೆ ಒoದು touch ಕೊಡ್ಬೇಕೆನ್ನೆಸಿದಾಗ ನನಪಿಗೆ ಬಂದಿದ್ದು ಪ್ರಕೃತಿಯ ಸೌಂದರ್ಯ. ಎಷ್ಟೇ ಒತ್ತಡಗಳ ಮದ್ಯೆ ralax change ಬೇಕೆನಿಸಿದಾಗ ಒoದು ಸುಂದರ place ಸುತ್ತಲೂ ಅಚ್ಚ ಹಸಿರು ಜಗತ್ತಿನ ತುಂಬೆಲ್ಲ ಇರುವ ಬಣ್ಣ ಬಣ್ಣದ ಹೂವ್ಗಳು ಚಿಲಿಪಿಲಿ ಚಿಲಿಪಿಲಿ ಹಕ್ಕಿಗಳ ಕಲರವ ಆಗಾಗ ಇಂಪಾಗಿ ಕೂಗುವ ಕೋಗಿಲೆಯ ನಾದ ಮದ್ಯೆ ಜುಳು ಜುಳು ಹರಿಯುವ ನೀರಿನ ಸೊಬಗು, ಸ್ವಲ್ಪ ಹೊತ್ತು ಕಣ್ಣ್ ಮುಚ್ಚಿ ಕುಳಿತರೆ ವಾವ! ಇನ್ನೇನ ಬೇಕು ಸಂತೋಷಕ್ಕೆ ಮನಸಿನ ನೆಮ್ಮದಿಗೆ.
ನಾನು ಜಗಕೆ ಸುಂದರಿ
ನಾನಿರುವೆ ಎಲ್ಲೆಡೆ
ಹಳದಿ ಕೆಂಪು ಬಿಳಿ
ತಿಳಿ ಗುಲಾಬಿ ನನ್ನ ಛಾಯೆ
ಹೇಳೇ ಗೆಳತೀ ಯಾರದರುಂಟೆ
ಜಗದಿ ನನ್ನ ಸೋಲಿಸುವವರು
ನಾನಿರುವ ಕಡೆ ಪರಿಮಳಕೆ ಕೊನೆಇಲ್ಲ
ಪ್ರೀತಿಗೆ ನಾನೇ ರಾಣಿ
ಚೆಲುವೆಗೆ
ನಾನೇ
ಮಹಾರಾಣಿ
ನೋಡಿದೊಡನೆ ವಾವ !
ಎನ್ನುವ ಉದ್ಗಾರ
ಹೇಳೇ ಗೆಳತೀ ಯಾರದರುಂಟೆ
ಜಗದಿ ನನ್ನ ದ್ವೇಷೀಸುವವರು
ಪ್ರೀತಿಗೊಂದು ಬಣ್ಣ
ಸ್ನೇಹಕ್ಕೊಂದು ಬಣ್ಣ
ಶತ್ರುಗಳ ಮನದಲ್ಲಿ
ಪ್ರೀತಿಯ ಹೊಂಬಣ್ಣ
ಮರಳುಸುವ ನನ್ನ ಶಕ್ತಿಗೆ
ಸರಿಸಾಟಿ
ಯಾರಾದರುಂಟೆ
ಹೇಳೇ ಗೆಳತೀ
ಆದರೆ ಖೇದ ಪಡುವ ವಿಷಯ ಈಗಿನ fast going ಜಗತ್ತಲ್ಲಿ ಡೆವಲಪ್ಮೆಂಟ್ ಹೆಸರಲ್ಲಿ ಅದೆಷ್ಟೋ ನಿಸರ್ಗದ ನಾಶ ಆಗತಿರೋದು. ನಾವೆಲ್ಲರೂ
ಒಂದು
ಹೆಜ್ಜೆ ಮುಂದಿಟ್ಟು ನಮ್ಮಲ್ಲಿರುವ ಗಿಡಮರಗಳ ಉಳಿವಿನ ಕಡೆ ಗಮನ ಹರಿಸಿದರೆ ಸುಂದರ ನಿಸರ್ಗದ ಸ್ವರ್ಗ ನಿರ್ಮಾಣವಾಂದತೆ ಆಗುತ್ತದೆ.
ಒಂದು ಸುಂದರ ಪ್ರಕೃತಿಯ ಸೊಬಗು ನಿನ್ನ ಬದಲಾವಣೆಯ ಬಿಂದು





